ಸೋಮವಾರ, ಮೇ 23, 2022
21 °C

‘ಆದಿಪುರುಷ್‌’ ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಓಂ ರಾವುತ್‌ ಮತ್ತು ನಟ ಪ್ರಭಾಸ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗಲಿರುವ ‘ಆದಿಪುರುಷ್‌’ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈಗಾಗಲೇ, ಚಿತ್ರತಂಡ ಇದರಲ್ಲಿ ಲಂಕೇಶನ ಪಾತ್ರದಲ್ಲಿ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದೆ.

₹ 500 ಕೋಟಿ ವೆಚ್ಚದಡಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಯಾರು ಸಂಗೀತ ಸಂಯೋಜಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಈ 3ಡಿ ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ನೀಡಲಿದ್ದಾರೆ ಎಂದು ಸುದ್ದಿಯಿದೆ. ಆಸ್ಕರ್‌ ಪ್ರಶಸ್ತಿ ವಿಜೇತ ರೆಹಮಾನ್‌ ಅವರೊಟ್ಟಿಗೆ ಈಗಾಗಲೇ ಚಿತ್ರತಂಡ ಮಾತುಕತೆಯನ್ನೂ ನಡೆಸಿದೆಯಂತೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ನಟನೆಯ ‘2.0’ ಚಿತ್ರಕ್ಕೆ ರೆಹಮಾನ್‌ ಅವರೇ ಸಂಗೀತ ಸಂಯೋಜಿಸಿದ್ದರು. ‘ಆದಿಪುರುಷ್‌’ ಪ್ಯಾನ್‌ ಇಂಡಿಯಾ ಸಿನಿಮಾ. ಹಾಗಾಗಿ, ಅವರಿಂದಲೇ ಸಂಗೀತ ಸಂಯೋಜಿಸುವ ಇರಾದೆ ಚಿತ್ರತಂಡದ್ದು.

ಚಿತ್ರದಲ್ಲಿ ಪ್ರಭಾಸ್‌ ಅವರದ್ದು ರಾಮನ ಪಾತ್ರ. ಸೀತೆಯಾಗಿ ಕಿಯಾರಾ ಅಡ್ವಾಣಿ ಅಥವಾ ಕೀರ್ತಿ ಸುರೇಶ್‌ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತು. ಈಗ ನಟಿ ಅನುಷ್ಕಾ ಶರ್ಮ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಪ್ರಭಾಸ್‌ ಮತ್ತು ಸೈಫ್‌ ಅಲಿ ಖಾನ್‌ ಹೊರತಾಗಿ ಚಿತ್ರದ ಉಳಿದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

ಪ್ರಭಾಸ್‌ಗೆ ತರಬೇತಿ

‘ಆದಿಪುರುಷ್‌’ ಸಿನಿಮಾ ಘೋಷಣೆಯಾದ ದಿನದಿಂದಲೂ ಸಿನಿಪ್ರಿಯರ ಆಕರ್ಷಣೆಯ ಕೇಂದ್ರವಾಗಿರುವುದು ದಿಟ.

ಈ ತಿಂಗಳನಲ್ಲಿ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಚಿತ್ರದ ಶೂಟಿಂಗ್‌ ಶುರುವಾಗಲಿದೆ. ಈ ನಡುವೆಯೇ ‘ಆದಿಪುರುಷ್‌’ ಚಿತ್ರದ ಪಾತ್ರಕ್ಕೆ ತಕ್ಕಂತೆ ದೈಹಿಕ ಸಾಮರ್ಥ್ಯ ಹಾಗೂ ಭಾಷಾ ಉಚ್ಚಾರಣೆ ಬಗ್ಗೆ ನಿರ್ದೇಶಕ ಓಂ ರಾವುತ್‌ ಮೊಬೈಲ್‌ ಮೂಲಕವೇ ಪ್ರಭಾಸ್‌ಗೆ ಸಲಹೆ ಮತ್ತು ತರಬೇತಿ ನೀಡುತ್ತಿದ್ದಾರಂತೆ. ಮುಂದಿನ ವರ್ಷದ ಜನವರಿಯಲ್ಲಿ ಇದರ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು