ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯನತಾರಾ ಇಲ್ಲದೆ ‘ಆರಂ–2’ ಇಲ್ಲ: ನಿರ್ದೇಶಕ ಗೋಪಿ ನಾಯ್ನರ್

Last Updated 28 ನವೆಂಬರ್ 2019, 10:10 IST
ಅಕ್ಷರ ಗಾತ್ರ

ಆರಂ–2 ಸಿನಿಮಾದಲ್ಲಿ ಬಹುಭಾಷಾ ನಟಿ ನಯನತಾರಾ ಅವರೇ ಇರುತ್ತಾರೆ ಎಂದು ಹೇಳುವ ಮೂಲಕ ನಿರ್ದೇಶಕ ಗೋಪಿ ನಾಯ್ನರ್‌ ನಾಯಕಿಯ ಕುರಿತು ಹಬ್ಬಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಗೋಪಿ ನಾಯ್ನಾರ್‌ ನಿರ್ದೇಶನದ ‘ಆರಂ’ ಚಿತ್ರದಲ್ಲಿ ನಟಿ ನಯನತಾರಾ ಅವರು ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸಿ ಗಮನ ಸೆಳೆದಿದ್ದರು. ಕಳೆದ ವರ್ಷದ ಹಿಟ್‌ ಚಿತ್ರಗಳಲ್ಲಿ ‘ಆರಂ’ ಕೂಡ ಒಂದಾಗಿತ್ತು.

ಆರಂ ಸಿನಿಮಾದಲ್ಲಿ ಜವಾಬ್ದಾರಿಯುತ ಐಎಎಸ್‌ ಅಧಿಕಾರಿಯಾಗಿ ಅವರು ನಟಿಸಿದ್ದರು. ಪಾಳು ಬಿದ್ದ ಕೊಳವೆಬಾವಿಯೊಳಗೆ 4 ವರ್ಷದ ಮಗು ಬೀಳುತ್ತದೆ. ರಕ್ಷಣಾ ಕಾರ್ಯಾಚರಣೆ ಮಾಡುತ್ತಾ ವ್ಯವಸ್ಥೆಯ ಲೋಪದೋಷಗಳು ಹಾಗೂ ಸರ್ಕಾರಕ್ಕಿರುವಬಡವರ ಬಗೆಗಿನ ಅಸಡ್ಡೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ.

ಅದಾದ ನಂತರ ಅದೇ ನಿರ್ದೇಶಕರು ಅರಂ–2 ಘೋಷಿಸಿದ್ದರು. ಹಾಗಾಗಿ ಆರಂ ಮುಂದುವರಿದ ಭಾಗವೇ ಆರಂ–2 ಎಂದೇ ಬಿಂಬಿತವಾಯಿತು. ಜೊತೆಗೆ ನಯನತಾರಾ ಬದಲು ಸಮಂತಾ ಅಕ್ಕಿನೇನಿ ಈ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕಾಲಿವುಡ್‌ನಲ್ಲಿ ಹರಿದಾಡಿತು.

ಈಗ ಅದೆಲ್ಲ ಸುದ್ದಿಗಳಿಗೆ ಫುಲ್‌ಸ್ಟಾಪ್‌ ಇಟ್ಟಿರುವ ನಿರ್ದೇಶಕರು, ಆರಂ–2 ಸಿನಿಮಾ ಅರಂ ಮುಂದುವರಿದ ಭಾಗವಲ್ಲ. ಇದು ಹೊಸ ಕಥೆ ಹಾಗೂ ಮಹಿಳಾ ಪ್ರಧಾನ ಸಿನಿಮಾವಾಗಿದೆ. ಇದು ನಯನತಾರಾ ಅವರಿಗೆಂದೇ ಬರೆಯಲಾಗಿದ್ದು, ಅವರನ್ನು ಬಿಟ್ಟು ಬೇರೆ ಯಾರೊಂದಿಗೂ ಈ ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರಂ 2 ಸಿನಿಮಾ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ನಯನತಾರಾ ಅವರು ಸದ್ಯ ಬ್ಯುಸಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾ ರೂಪುಗೊಳ್ಳುವುದಕ್ಕೆ ಇನ್ನು ಸಾಕಷ್ಟು ಸಮಯವಾಗುತ್ತದೆ ಎಂದೂ ಹೇಳಿದ್ದಾರೆ.

ಗೋಪಿ ನಾಯ್ನರ್‌ ಅವರು ಸದ್ಯ ಬಾಬಿ ಸಿಂಹ ಅವರೊಂದಿಗೆ ಬುಡಕಟ್ಟು ಸಮುದಾಯದ ಮುಖಂಡ ಬಿರ್ಸಾ ಮುಂಡ ಅವರ ಜೀವನಚರಿತ್ರೆ ಆಧಾರಿತ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT