ಭಾನುವಾರ, ಮೇ 16, 2021
22 °C

ಅಲಿಯಾ– ರಣಬೀರ್‌ ಹನಿಮೂನ್‌ ಪ್ಲ್ಯಾನ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಾಲಿವುಡ್‌ ನಟ ರಣಬೀರ್‌ ಕಪೂರ್‌-ಅಲಿಯಾ ಭಟ್‌ ಜೋಡಿಗೆ ಆಗಲೇ ಹನಿಮೂನ್‌ ಪ್ಲೇಸ್‌ ಚಿಂತೆಯಂತೆ! ಇವರಿಬ್ಬರು ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿ ತುಂಬ ಸಮಯ ಆಗಿದೆ. ಸಿಲೆಬ್ರಿಟಿ ಮದುವೆ ಸಮಾರಂಭವನ್ನು ಬಿ–ಟೌನ್‌ ಅಂತೂ ಕಾತರದಿಂದ ಕಾಯುತ್ತಿದೆ.

ಒಂದೆಡೆ ಅಭಿಮಾನಿಗಳು ಅವರ ಮದುವೆಗೆ ಕಾಯುತ್ತಿದ್ದರೆ, ಈ ಜೋಡಿ ಮದುವೆ ನಂತರ ಹನಿಮೂನ್‌ ಹೋಗಲು ಜಾಗದ ಆಯ್ಕೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆಯಂತೆ. ಇದಕ್ಕೆ ಪುರಾವೆ ಎಂಬಂತೆ ಈ ಜೋಡಿ ತಮಗೆ ತುಂಬ ಪ್ರೈವೆಸಿ ಇರುವ ಚಂದದ ಹನಿಮೂನ್‌ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ ಎಂಬ ಸುದ್ದಿ ಎಲ್ಲೆಡೆ ಪುಂಖಾನುಪುಂಖವಾಗಿ ಹರಿದಾಡುತ್ತಿವೆ. 

ಇವರ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್‌, ಬಹಮಾಸ್‌, ಫಿನ್ಲೆಂಡ್‌ ಹಾಗೂ ಇನ್ನಿತರ ಕೆಲ ಸ್ಥಳಗಳಿವೆ. ಜಗತ್ತಿನಲ್ಲಿ ಯಾವೆಲ್ಲ ಉತ್ತಮ ಸ್ಥಳಗಳಿವೆ ಎಂಬ ಬಗ್ಗೆಯೂ ಸ್ನೇಹಿತರ ಬಳಿ ವಿಚಾರಿಸುತ್ತಿದೆಯಂತೆ. ಇದೇ ವರ್ಷದಲ್ಲಿ ಈ ಜೋಡಿ ಮದುವೆ ನಡೆದರೆ ಅದೊಂದು ‘2020ರ ವೆಡ್ಡಿಂಗ್‌ ಆಫ್‌ ದಿ ಇಯರ್‌’ ಆಗುವುದರಲ್ಲಿ ಸಂದೇಹವೇ ಇಲ್ಲ.

ಆನ್‌ ಹಾಗೂ ಆಫ್‌ ಸ್ಕ್ರೀನ್‌ನಲ್ಲಿ ಮುದ್ದು ಜೋಡಿ ಎಂದೇ ಇವರು ಗುರುತಿಸಿಕೊಂಡಿದ್ದಾರೆ. ರಣಬೀರ್‌ ಹಾಗೂ ಅಲಿಯಾ ತಮ್ಮ ಕ್ಯೂಟ್‌ನೆಸ್‌ ಹಾಗೂ ಪಕ್ವ ನಡವಳಿಕೆಯಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. 

ಆಯಾನ್‌ ಮುಖರ್ಜಿಯ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್‌ ಹಾಗೂ ಅಲಿಯಾ ಭಟ್‌ ಒಟ್ಟಿಗೆ ನಟಿಸುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಇನ್ನು 2020ರಲ್ಲಿ ಮದುವೆಯಾಗಲಿರುವ ಜೋಡಿಗಳ ಸಾಲಿಗೆ ಮಲೈಕಾ– ಅರ್ಜುನ್‌ ಕಪೂರ್‌, ವರುಣ್‌ ಧವನ್‌– ನತಾಶಾ ದಲಾಲ್‌, ಫರ್ಹಾನ್‌ ಅಖ್ತರ್‌– ಶಿವಾನಿ ದಾಂಡೇಕರ್‌ ಸೇರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು