ಮಂಗಳವಾರ, ನವೆಂಬರ್ 19, 2019
23 °C

ದಾಖಲೆ ಬರೆದ 'ಪಾಣಿಪತ್‌': 1.95 ಕೋಟಿ ಜನರಿಂದ ಟ್ರೇಲರ್‌ ವೀಕ್ಷಣೆ

Published:
Updated:

ಮುಂಬೈ: ಆಶುತೋಷ್‌ ಗೊವಾರಿಕರ್‌ ನಿರ್ದೇಶನದ ಬಹುತಾರಾಗಣದ ‘ಪಾಣಿಪತ್‌’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು ಯುಟ್ಯೂಬ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಆಗಿದೆ.

ಚಿತ್ರತಂಡ ನವೆಂಬರ್‌ 4 ರಂದು ಟ್ರೇಲರ್‌ ಬಿಡುಗಡೆ ಮಾಡಿತ್ತು. ಇಲ್ಲಿಯವರೆಗೂ ಸುಮಾರು 1.95 ಕೋಟಿ ಜನರು ಟ್ರೇಲರ್‌ ವೀಕ್ಷಣೆ ಮಾಡಿರುವುದು ದಾಖಲೆಯಾಗಿದೆ. 4.8 ಲಕ್ಷಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದು 65 ಸಾವಿರ ಜನ ಕಮೆಂಟ್‌ಗಳನ್ನು ಹಾಕಿದ್ದಾರೆ. 

ಈ ಚಿತ್ರದ ನಾಯಕ ಅರ್ಜುನ್‌ ಕಪೂರ್‌, ಸದಾಶಿವ ರಾವ್‌ ಭಾವು ಪಾತ್ರದಲ್ಲಿ, ನಾಯಕಿಯಾಗಿರುವ  ಕೃತಿ ಸೇನನ್ ಅವರು ಪಾರ್ವತಿ ಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸಂಜಯ್‌ ದತ್‌ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. 

ಚಿತ್ರವು ಮೂರನೇ ಪಾಣಿಪತ್ ಕದನದ ಸನ್ನಿವೇಶಗಳ ಕಥಾಹಂದರ ಹೊಂದಿದೆ. ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಇದೇ ಡಿಸೆಂಬರ್ 6ಕ್ಕೆ  ಚಿತ್ರ ಬಿಡುಗಡೆಯಾಗಲಿದೆ. 

2016ರಲ್ಲಿ ‘ಮೊಹೆಂಜೊ ದಾರೊ’ ಚಿತ್ರವನ್ನು ನಿರ್ದೇಶಿಸಿದ್ದ ಆಶುತೋಷ್, ಮತ್ತೊಮ್ಮೆ ಐತಿಹಾಸಿಕ ಚಿತ್ರ ನಿರ್ದೇಶನ ಮಾಡಿದ್ದಾರೆ. ಮರಾಠರ ಶೌರ್ಯವನ್ನು ಅವರು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)