ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಅರಂ–2: ನಯನತಾರಾ ಸ್ಥಾನಕ್ಕೆ ಸಮಂತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷ ಬಿಡುಗಡೆಯಾಗಿದ್ದ ‘ಅರಂ’ ಚಿತ್ರದಲ್ಲಿ ನಟಿ ನಯನತಾರ ಅವರು ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸಿ ಗಮನ ಸೆಳೆದಿದ್ದರು. ಈಗ ಅರಂ –2 ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಸಮಂತಾ ಅಕ್ಕಿನೇನಿ ನಟಿಸುತ್ತಿದ್ದು, ಈ ಚಿತ್ರಕ್ಕೆ ನಯನತಾರ ಬದಲಾಗಿ ಸಮಂತಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂದು ಗಾಳಿಸುದ್ದಿ ಹರಡಿದೆ. 

ಸದ್ಯ ಸಮಂತಾ ಅಭಿನಯದ ‘ಓ ಬೇಬಿ’ ಬಿಡುಗಡೆಯಾಗಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಸಮಂತಾ ಈಗ ಮಹಿಳಾ ಕೇಂದ್ರಿತ ಸಿನಿಮಾಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಿದ್ದು, ಈಗ ಮತ್ತೊಮ್ಮೆ ಅಂತಹದೇ ಸಿನಿಮಾ ಅವಕಾಶವನ್ನು ಬಾಚಿಕೊಂಡಿದ್ದಾರೆ. 

ಕಳೆದ ವರ್ಷದ ಹಿಟ್‌ ಚಿತ್ರಗಳಲ್ಲಿ ‘ಅರಂ’ ಕೂಡ ಒಂದಾಗಿತ್ತು. ನಯನತಾರಗೆ ಈ ಚಿತ್ರ ಹೊಸ ಇಮೇಜ್‌ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಜವಾಬ್ದಾರಿಯುತ ಐಎಎಸ್‌ ಅಧಿಕಾರಿಯಾಗಿ ಅವರು ನಟಿಸಿದ್ದರು. ಪಾಳು ಬಿದ್ದ ಮುಚ್ಚದೇ ಇದ್ದ ಬೋರ್‌ವೆಲ್‌ ಗುಂಡಿಯೊಳಗೆ 4 ವರ್ಷದ ಮಗು ಬೀಳುತ್ತದೆ. ರಕ್ಷಣಾ ಕಾರ್ಯಾಚರಣೆ ಮಾಡುತ್ತಾ ವ್ಯವಸ್ಥೆಯ ಲೋಪದೋಷಗಳು ಹಾಗೂ ಸರ್ಕಾರಕ್ಕೆ ಬಡವರ ಬಗೆಗಿನ ಅಸಡ್ಡೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಈಗ
ಅರಂ –2 ಇನ್ನಷ್ಟು ಪವರ್‌ಫುಲ್‌ ಇರಲಿದೆ. ಆದರೆ ಈ ಚಿತ್ರ ಮುಂದುವರಿದ ಭಾಗವೇ ಅಥವಾ ಬೇರೆಯದೇ ಕತೆಯನ್ನು ಒಳಗೊಂಡಿರಲಿದೆಯೇ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 

ಅರಂ ಚಿತ್ರವನ್ನು ನಿರ್ದೇಶನ ಮಾಡಿದ್ದ ಗೋಪಿ ನಾಯನಾರ್‌ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ಗೋಪಿ ಅವರು ಸಮಂತಾ ಅವರಿಗೆ ಚಿತ್ರಕತೆ ಬಗ್ಗೆ ವಿವರಿಸಿದ್ದು, ಕತೆ ಕೇಳಿ ಇಷ್ಟಪಟ್ಟಿರುವ ಸಮಂತಾ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿವೆ. 

ಸಮಂತಾ ಸದ್ಯ ತಮಿಳಿನ ಹಿಟ್‌ ಸಿನಿಮಾ 96 ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಗೋಪಿ ನಾಯನಾರ್‌ ಅವರು ಎರಡನೇ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಜೈ ನಾಯಕನಾಗಿ ನಟಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು