ಬುಧವಾರ, ಆಗಸ್ಟ್ 21, 2019
28 °C

‘ಹಿರಣ್ಯಕಶಿಪು’ ಚಿತ್ರದಲ್ಲಿ ಆರ್ಯನ್‌

Published:
Updated:
Prajavani

ಶಾರುಕ್‌ ಖಾನ್ ಪುತ್ರ ಆರ್ಯನ್‌ ಖಾನ್‌, ಪ್ರಭಾಸ್‌ ನಟನೆಯ ‘ಹಿರಣ್ಯಕಶಿಪು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ.

ಇತ್ತೀಚೆಗೆ ಆರ್ಯನ್ ಹಾಲಿವುಡ್‌ನ ‘ದಿ ಲಯನ್ ಕಿಂಗ್’ ಹಿಂದಿ ಸರಣಿಗೆ ಧ್ವನಿ ನೀಡಿದ್ದಾನೆ. ಇದರಲ್ಲಿ ‘ಸಿಂಬಾ’ ಪಾತ್ರಕ್ಕೆ ಆರ್ಯನ್ ಧ್ವನಿ ನೀಡಿದ್ದರೆ, ಅಪ್ಪ ಶಾರೂಕ್ ‘ಮುಫ್ಸಾ’ ಪಾತ್ರಕ್ಕೆ ಧ್ವನಿ ನೀಡಿದ್ದರು. ಈಗ ಹಿರಿತೆರೆಯತ್ತ ಆರ್ಯನ್ ದೃಷ್ಟಿ ನೆಟ್ಟಿದ್ದು, ‘ಹಿರಣ್ಯಕಶಿಪು’ ಪೌರಾಣಿಕ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶಿಸಲಿದ್ದಾರೆ.

ಬಹುತಾರಾಗಣದ ಈ ಚಿತ್ರದಲ್ಲಿ ಪ್ರಹ್ಲಾದ್‌ ಪಾತ್ರದಲ್ಲಿ ನಟಿಸುವಂತೆ ಈ ಚಿತ್ರದ ನಿರ್ದೇಶಕ ಗುಣಶೇಖರ್‌, ಆರ್ಯನ್‌ ಅವರಿಗೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿಯಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದರಲ್ಲಿ ಬಾಹುಬಲಿ ತಂಡದ ಪ್ರಭಾಸ್‌, ರಾನಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಕೂಡ ನಟಿಸಲಿದ್ದಾರೆ. ಇದರಲ್ಲಿ ರಾನಾ ದಗ್ಗುಬಾಟಿ ಹಿರಣ್ಯಕಶಿಪು ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಗ್ಗೆ ನಿರ್ದೇಶಕ ಗುಣಶೇಖರ್‌ ಸ್ಪಷ್ಟನೆ ನೀಡಿಲ್ಲ.

Post Comments (+)