ಆಶಾ ಭೋಸ್ಲೆ ಎರಡು ಬಾರಿ ವಿವಾಹವಾಗಿದ್ದರು. 16ನೇ ವಯಸ್ಸಿನಲ್ಲೇ ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ 31 ವರ್ಷದ ಗಣಪತ್ ರಾವ್ ಭೋಸ್ಲೆ ಅವರನ್ನು ವಿವಾಹವಾಗಿದ್ದರು. ಪತಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿದ್ದ ಆಶಾ, 1960ರಲ್ಲಿ ಸಂಬಂಧ ಮುರಿದುಕೊಂಡಿದ್ದರು. 1980ರಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಆರ್.ಡಿ. ಬರ್ಮನ್ ಅವರ ಜೊತೆ ಎರಡನೇ ಮದುವೆಯಾಗಿದ್ದರು. ಸಂಗೀತ ಉದ್ಯಮದಲ್ಲಿ ಈ ಜೋಡಿಯನ್ನು ಲೆಜೆಂಡರಿ ಕಪಲ್ ಎಂದು ಪರಿಗಣಿಸಲಾಗಿತ್ತು, ಒಟ್ಟಿಗೆ ಹಲವು ಐಕಾನಿಕ್ ಮತ್ತು ಮಾಂತ್ರಿಕ ಹಾಡುಗಳಿಗೆ ಕೆಲಸ ಮಾಡಿದ್ದಾರೆ.