ಶ್ರೀಮನ್ನಾರಾಯಣನ ದರ್ಶನ ಯಾವಾಗ ಗೊತ್ತಾ?!

ಶನಿವಾರ, ಏಪ್ರಿಲ್ 20, 2019
29 °C

ಶ್ರೀಮನ್ನಾರಾಯಣನ ದರ್ಶನ ಯಾವಾಗ ಗೊತ್ತಾ?!

Published:
Updated:

ಶ್ರೀಮನ್ನಾರಾಯಣನ ದರ್ಶನ ಭಾಗ್ಯ ಯಾವಾಗ ಸಿಗಲಿದೆ ಎಂಬುದು ಗೊತ್ತಾಯ್ತಾ?!

ಇದೇನು ಪ್ರಶ್ನೆ ಎಂದು ಭಾವಿಸಬೇಡಿ, ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆ ಯಾವಾಗ ಎಂಬುದು ಈ ಪ್ರಶ್ನೆಯ ಹಿಂದಿನ ಮರ್ಮ.

ಅಂದಹಾಗೆ, ಈ ಚಿತ್ರದ ಬಿಡುಗಡೆಯ ಸಮಯವನ್ನು ಚಿತ್ರತಂಡ ಈಗ ಬಹಿರಂಗಪಡಿಸಿದೆ. ‘ಚಿತ್ರ ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗುವುದು ಖಚಿತ’ ಎಂದು ಹೇಳಿದೆ ಚಿತ್ರತಂಡ. ಸಿನಿಮಾ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಡಬ್ಬಿಂಗ್‌ ಕಾರ್ಯ ಈಗ ಶುರುವಾಗಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳ ಭಾಷೆಗಳಲ್ಲಿ ಇದು ಬಿಡುಗಡೆ ಆಗಲಿದೆ.

‘ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಬೇಕು. ವಿಜಯಪುರ ಭಾಗದಲ್ಲಿ ನಡೆಸಬೇಕಿರುವ ಚಿಕ್ಕ ಅವಧಿಯ ಚಿತ್ರೀಕರಣವೊಂದು ಬಾಕಿ ಇದೆ. ಅದು ಕೂಡ ಬೇಗ ಆಗುತ್ತದೆ’ ಎಂದು ಈ ಸಿನಿಮಾ ತಂಡದ ಸದಸ್ಯರೊಬ್ಬರು ‘ಸಿನಿಮಾ ಪುರವಣಿ’ಗೆ ತಿಳಿಸಿದರು.

ಈ ಚಿತ್ರದ ಶೇಕಡ 90ರಷ್ಟು ಭಾಗದ ಚಿತ್ರೀಕರಣ ನಡೆದಿರುವುದು ಸೆಟ್‌ಗಳಲ್ಲಿ. ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಒಂಬತ್ತು ಸೆಟ್‌ಗಳನ್ನು ಹಾಕಲಾಗಿತ್ತು. ‘ಚಿತ್ರದ ಇಷ್ಟು ಭಾಗವನ್ನು ಸೆಟ್‌ನಲ್ಲಿಯೇ ಚಿತ್ರೀಕರಿಸಿದ್ದು ಇದೇ ಮೊದಲಿರಬೇಕು’ ಎನ್ನುತ್ತಾರೆ ಚಿತ್ರತಂಡದ ಸದಸ್ಯರೊಬ್ಬರು. 1980ರ ಅವಧಿಯಲ್ಲಿ ಉತ್ತರ ಕರ್ನಾಟಕದ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿ ಇರಲಿದೆ.

ಇದರಲ್ಲಿ ರಕ್ಷಿತ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆ ಶಾನ್ವಿ ಶ್ರೀವಾಸ್ತವ ಅವರು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಟ್ರೇಲರ್‌ ವೀಕ್ಷಿಸಿದರೆ, ಇದರಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ವಿಭಿನ್ನ ಗೆಟಪ್‌ನಲ್ಲಿ ಕಾಣಬಹುದು ಅನಿಸುತ್ತದೆ. ಇದು ಕಿರಿಕ್ ಪಾರ್ಟಿ ನಂತರ ತೆರೆಗೆ ಬರುತ್ತಿರುವ ರಕ್ಷಿತ್ ಅಭಿನಯದ ಸಿನಿಮಾ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !