ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಯ್ಯಪ್ಪನುಂ ಕೋಶಿಯುಂ’ ರಿಮೇಕ್‌: ಪವನ್ ಕಲ್ಯಾಣ್‌ ಸಂಭಾವನೆ ಎಷ್ಟು?

Last Updated 22 ಡಿಸೆಂಬರ್ 2020, 6:54 IST
ಅಕ್ಷರ ಗಾತ್ರ

ಮಲಯಾಳಂನ ಯಶಸ್ವಿ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ತೆಲುಗಿಗೆ ರಿಮೇಕ್‌ ಆಗುತ್ತಿದೆ ಎಂಬ ಸುದ್ದಿ ಕೇಳಿದಾಗಿನಿಂದ ಈ ವಿಷಯಕ್ಕೆ ಸಂಬಂಧಿಸಿ ಅನೇಕ ಹೊಸ ಹೊಸ ಸುದ್ದಿಗಳು ಕೇಳಿಬರುತ್ತಿತ್ತು. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಾಗಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ ಘೋಷಿಸಿದೆ. ಕೆಲದಿನಗಳಿಂದ ಈ ಚಿತ್ರದ ಮುಖ್ಯಪಾತ್ರದಲ್ಲಿ ಯಾರ‍್ಯಾರು ನಟಿಸಲಿದ್ದಾರೆ ಎಂಬ ಕುತೂಹಲವೂ ಇತ್ತು. ಈಗ ಆ ಕುತೂಹಲಕ್ಕೂ ಬ್ರೇಕ್ ಬಿದ್ದಿದ್ದು ಪವನ್ ಕಲ್ಯಾಣ್ ಹಾಗೂ ರಾನಾ ನಟಿಸುವುದು ಫಿಕ್ಸ್ ಆಗಿದೆ.

ಮಲಯಾಳಂನಲ್ಲಿ ಬಿಜು ಮೆನನ್‌ ಹಾಗೂ ಪ್ರಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರದಲ್ಲಿ ಪವನ್ ಹಾಗೂ ರಾನಾ ನಟಿಸುವುದು ಪಕ್ಕಾ ಆಗಿದೆ. ಸದ್ಯದ ಸುದ್ದಿ ಎಂದರೆ ಸಿನಿಮಾದ ಸಂಭಾವನೆಯದ್ದು.

ಈ ಸಿನಿಮಾಕ್ಕೆ ಪವನ್‌ ಕಲ್ಯಾಣ್ ₹ 50 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ರಾನಾ ಸಂಭಾವನೆ ₹ 5 ಕೋಟಿಯಂತೆ.

ಈ ಚಿತ್ರಕ್ಕೆ ಸಾಗರ್ ಚಂದ್ರ ನಿರ್ದೇಶನವಿದ್ದು, ತಮನ್‌ ಎಸ್‌. ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಚಿತ್ರಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ 2021ರ ಜನವರಿಯಿಂದ ಆರಂಭವಾಗಲಿದ್ದು ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT