ಶುಕ್ರವಾರ, ಸೆಪ್ಟೆಂಬರ್ 17, 2021
30 °C

ನಿರ್ದೇಶಕರ ಜತೆ ಮಲಗಲು ನಿರಾಕರಿಸಿದ್ದಕ್ಕೆ ಅವಕಾಶಗಳನ್ನು ಕಳೆದುಕೊಂಡೆ –ನರ್ಗಿಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌:  2011ರಲ್ಲಿ ತೆರೆಕಂಡ ರಾಕ್‌ಸ್ಟಾರ್‌ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಕ್ಯೂಟ್‌ ಬೆಡಗಿ ನರ್ಗಿಸ್‌ ಫಖ್ರಿ ಬಾಲಿವುಡ್‌ನಲ್ಲಿರುವ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ.

 ರಾಕ್‌ಸ್ಟಾರ್‌ ಸಿನಿಮಾ ನರ್ಗಿಸ್‌ ಫಖ್ರಿ ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರ. ಇದರಲ್ಲಿನ ಅಭಿನಯಕ್ಕಾಗಿ ಫಿಲಂ ಫೇರ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ನಂತರ ಬಂದ ಮದ್ರಾಸ್‌ ಕೆಫೆ ಸಿನಿಮಾ ಕೂಡ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸ್ಪೈ, ಹೌಸ್‌ಫುಲ್‌–3 ಸೇರಿದಂತೆ ಮೂರು ಹಾಸ್ಯಪ್ರಧಾನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನರ್ಗಿಸ್‌ ನಂತರದ ದಿನಗಳಲ್ಲಿ ಸಿನಿಮಾಗಳಿಂದ ದೂರ ಉಳಿದರು.

ನಾನು ಸಿನಿಮಾದಿಂದ ದೂರ ಉಳಿಯಲು ಕಾಸ್ಟಿಂಗ್‌ ಕೌಚ್‌ ಕಾರಣವಾಗಿದೆ. ನಿರ್ದೇಶಕರೊಂದಿಗೆ ಮಲಗಲು ನಿರಾಕರಿಸಿದ್ದಕ್ಕೆ ಸಾಕಷ್ಟು ಸಿನಿಮಾಗಳ ಅವಕಾಶವನ್ನು ಕಳೆದುಕೊಂಡೆ ಎಂದು ನರ್ಗಿಸ್‌ ತೆಲುಗಿನ ಟಾಲಿವುಡ್‌.ನೆಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಮಾಡೆಲಿಂಗ್‌ ಕ್ಷೇತ್ರದಿಂದ ಸಿನಿಮಾಗೆ ಬಂದೇ, ಈ ಎರಡು ಕ್ಷೇತ್ರಗಳಲ್ಲೂ ಕಾಸ್ಟಿಂಗ್‌ ಕೌಚ್‌ ಜೀವಂತವಾಗಿದೆ. ಬೆತ್ತಲೆ ಅಥವಾ ಟಾಪ್‌ಲೆಸ್‌ ಆಗಿ ಫೋಟೊ ಶೂಟ್‌ ಮಾಡಿಸಿಕೊಳ್ಳಲು ನಿರ್ದೇಶಕರು ಹೇಳುತ್ತಿದ್ದರು. ಕೆಲವರಂತೂ ನೆರವಾಗಿಯೇ ಮಲಗಲು ಹೇಳುತ್ತಿದ್ದರು. ಇದಕ್ಕೆ ನಾನು ಒಪ್ಪದಿದ್ದಾಗ ಅವಕಾಶಗಳ ಕಡಿಮೆ ಆದವು. ಕೊನೆಗೆ ಈ ಉದ್ಯಮದಿಂದ ದೂರ ಉಳಿಯಬೇಕಾಯಿತು ಎಂದು ನರ್ಗಿಸ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು