4

‘ಬೇಬಿ ಶಾಮಿಲಿ’ಗೆ ಈಗ 30!

Published:
Updated:
ಬೇಬಿ ಶಾಮಿಲಿ

ಮುದ್ದು ಮುದ್ದು ಮಾತುಗಳಿಂದ ವೀಕ್ಷಕರನ್ನು ತನ್ನ ಭಾವಕ್ಕೆ ತಕ್ಕಂತೆ ಕುಣಿಸುತ್ತಿದ್ದ ‘ಬೇಬಿ ಶಾಮಿಲಿ’ಯನ್ನು ಮರೆತಿರಲಾರಿರಿ. ‘ಬೇಬಿ ಶಾಮಿಲಿ’ ಈಗ 30ರ ಹರೆಯದ ಯುವತಿ!

ಎರಡನೇ ವಯಸ್ಸಿಗೇ ತಮಿಳಿನ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶಾಮಿಲಿ ಸಹಜ ಅಭಿನಯದಿಂದಲೇ ವೀಕ್ಷಕರ ಗಮನ ಸೆಳೆದವಳು. ಮಣಿರತ್ನಂ ನಿರ್ದೇಶನದ ‘ಅಂಜಲಿ’ ಚಿತ್ರದಲ್ಲಿನ ಮಾನಸಿಕ ಅಸ್ವಸ್ಥೆಯ ಪಾತ್ರಕ್ಕಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಬಂದಿತ್ತು. ದಾಕ್ಷಾಯಿನಿ, ಕಾದಂಬರಿ, ಕರುಳಿನ ಕುಡಿ, ಭೈರವಿ, ಚಿನ್ನ ನೀ ನಗುತಿರು, ಭುವನೇಶ್ವರಿ, ಮತ್ತೆ ಹಾಡಿತು ಕೋಗಿಲೆ, ಹೂವು –ಹಣ್ಣು ಮತ್ತು ಜಗದೀಶ್ವರಿ ಎಂಬ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 

ಚೆನ್ನೈ ಮೂಲದ ಶಾಮಿಲಿಯ ತಂದೆ ತಾಯಿ ಮಲಯಾಳಿಗಳು. 2010ರಿಂದ ಐದು ವರ್ಷ ಅವರು ವಿದ್ಯಾಭ್ಯಾಸ ಮತ್ತು ಉದ್ಯೋಗದ ಕಾರಣದಿಂದ ಚಿತ್ರರಂಗದಿಂದ ದೂರವಿದ್ದರು.

ಈಗ ಚೆನ್ನೈಗೆ ಮರಳಿದ್ದು ವೀರ ಶಿವಾಜಿ ಅವರ ಚಿತ್ರದಲ್ಲಿ ವಿಕ್ರಮ್‌ ಪ್ರಭು ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 22

  Happy
 • 5

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !