ಮಂಗಳವಾರ, ನವೆಂಬರ್ 24, 2020
22 °C

ಅಲ್ಲು ಕೊಟ್ಟ ಬ್ಯಾಚುಲರ್‌ ಪಾರ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗು ನಟ ಅಲ್ಲು ಅರ್ಜುನ್‌ ಅವರು ತಮ್ಮ ತಂಡದವರಿಗಾಗಿ ಅಚ್ಚರಿಯ ಬ್ಯಾಚುಲರ್‌ ಪಾರ್ಟಿ (ವಿವಾಹ ಪೂರ್ವದ ಔತಣಕೂಟ) ಏರ್ಪಡಿಸಿದ್ದಾರೆ. 

ಅವರ ತಂಡದಲ್ಲೊಬ್ಬರು ವಿವಾಹವಾಗುತ್ತಿದ್ದಾರೆ. ಅವರಿಗಾಗಿ ಈ ಪಾರ್ಟಿ ಏರ್ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಐ ಆಮ್‌ ಏಳೂರು ಸೀನು, ಅಲ್ಲು ಸಿವ೧, ರಮೇಶ್‌ಕೆ೨೩೪ ಹ್ಯಾಷ್‌ಟ್ಯಾಗ್‌ನಲ್ಲಿ ಈ ಪಾರ್ಟಿಯಲ್ಲಿ ಸ್ನೇಹಿತರ ಜತೆಗಿರುವ ಚಿತ್ರ ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿದೆ. 

ಈ ಫೋಟೋದಲ್ಲಿ ಅಲ್ಲು ಅರ್ಜುನ್‌ ಬಿಳಿ ಬಣ್ಣದ ಸ್ವೆಟ್‌ ಷರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಅಲ್ಲು ಅವರು ಸಮಯ ಸಿಕ್ಕಲ್ಲಿ ಈ ವಿವಾಹ ಸಮಾರಂಭಕ್ಕೂ ಹೋಗಬಹುದು ಎಂದು ಮೂಲಗಳು ಹೇಳಿವೆ.  

ಸದ್ಯ ಅಲ್ಲು ಅವರು ಸುಕುಮಾರ್‌ ನಿರ್ದೇಶನದ ಪುಷ್ಪ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಇದೇ ಚಿತ್ರದ ನಾಯಕಿಯಾಗಿ ಚಿತ್ತೂರು ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ. 

ವೇಣು ಶ್ರೀರಾಮ್‌ ಅವರ ಚಿತ್ರದಲ್ಲೂ ಅಲ್ಲು ಕಾಣಿಸಿಕೊಳ್ಳಲಿದ್ದಾರೆ. ಕೊರಟಾಲ ಶಿವ ಮಾತ್ರವಲ್ಲದೆ ಇನ್ನೊಂದು ಹೊಸ ಚಿತ್ರವೂ ಸಿದ್ಧತೆಯ ಹಾದಿಯಲ್ಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು