ಗುರುವಾರ , ಮೇ 6, 2021
23 °C

ಚಾಮರಾಜನಗರ: ‘ಬಹದ್ದೂರು ಗಂಡು’ ಚಿತ್ರೀಕರಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹದ್ದೂರ್‌ ಗಂಡು ಚಿತ್ರ ತಂಡ

ಚಾಮರಾಜನಗರ: ರಮೇಶ್‌ ರೆಡ್ಡಿ, ಪ್ರಸಿದ್ಧ್‌ ಸಿನಿಮಾಸ್‌ ಸಂಸ್ಥೆ ನಿರ್ಮಿಸುತ್ತಿರುವ, ಪ್ರಸಿದ್ಧ್‌ ಅವರು ನಿರ್ದೇಶಿಸುತ್ತಿರುವ ‘ಬಹದ್ದೂರು‌ ಗಂಡು’ ಚಲನಚಿತ್ರ ಚಿತ್ರೀಕರಣಕ್ಕೆ ಸೋಮವಾರ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಚಾಲನೆ ದೊರೆಯಿತು.

ನಿರ್ಮಾಪ‍ಕ ರಮೇಶ್‌ ರೆಡ್ಡಿ ಅವರು ಕ್ಲಾಪ್‌ ಮಾಡಿದರೆ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಕ್ಯಾಮೆರಾಗೆ ಚಾಲನೆ ನೀಡಿ ಶುಭಾಶಯ ಕೋರಿದರು. 

ಕಿರುತೆರೆಯ ನಟ ಕಿರಣ್‌ರಾಜ್‌ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರದಲ್ಲಿ, ಯಶ ಶಿವಕುಮಾರ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ಗ್ರಾಮೀಣ ಸೊಗಡಿನ ಕಥಾಹಂದರವುಳ್ಳ ಚಿತ್ರದ ಬಹುಪಾಲು ಚಿತ್ರೀಕರಣ ಚಾಮರಾಜನಗರದ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯಲಿದೆ. 30 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಾಮರಾಜೇಶ್ವರ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಉಳಿದಂತೆ ಸತ್ತೇಗಾಲ, ಯಳಂದೂರು, ವಡ್ಡಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. 

ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಾಮರಾಜನಗರದವರೇ ಆದ ಕಿಟ್ಟಿ ಕೌಶಿಕ್‌ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಗುಮ್ಮಿನೇನಿ ವಿಜಯ್‌ಬಾಬು ಅವರು ಸಂಗೀತ ನೀಡಲಿದ್ದಾರೆ. 

ತಾರಾಗಣದಲ್ಲಿ ರಮೇಶ್‌ಭಟ್‌, ಕರಿಸುಬ್ಬು, ಶಬರಿ ಮಂಜು, ನಾಗೇಶ್‌, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಸೌರಭ್‌ ಕುಲಕರ್ಣಿ, ಮಂಜು ಗಾಳಿಪುರ ಸೇರಿದಂತೆ ಹಲವರಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು