ಮತ್ತೆ ಜೊತೆಗೂಡಿದ ಶಿವಣ್ಣ–ನರ್ತನ್

7

ಮತ್ತೆ ಜೊತೆಗೂಡಿದ ಶಿವಣ್ಣ–ನರ್ತನ್

Published:
Updated:
Deccan Herald

ಶಿವರಾಜ್‌ಕುಮಾರ್ ಅವರಿಗೆ ಹೊಸ ಲುಕ್ ತಂದುಕೊಟ್ಟ ಚಿತ್ರ ‘ಮಫ್ತಿ’. ಆ ಚಿತ್ರದಲ್ಲಿ ಶಿವಣ್ಣ ಅವರದ್ದು ‘ಭೈರತಿ ರಣಗಲ್’ ಎಂಬ ವ್ಯಕ್ತಿಯ ಪಾತ್ರ. ಆ ಪಾತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು.

ಅದೇ ಪಾತ್ರದ ಹೆಸರನ್ನು ಸಿನಿಮಾ ಮಾಡಲು ಹೊರಟಿದ್ದಾರೆ ‘ಮಫ್ತಿ’ ಸಿನಿಮಾದ ನಿರ್ದೇಶಕ ನರ್ತನ್. ಶಿವಣ್ಣ ಅವರ ಜೊತೆಗೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿರುವ ನರ್ತನ್, ಆ ಚಿತ್ರಕ್ಕೆ ‘ಭೈರತಿ ರಣಗಲ್’ ಶೀರ್ಷಿಕೆ ಅಂತಿಮಗೊಳಿಸಿದ್ದಾರೆ.

ಶಿವಣ್ಣ ಅವರ ಹೋಮ್ ಬ್ಯಾನರ್ ಸಿನಿಮುತ್ತು ಕ್ರಿಯೇಷನ್ ಮೂಲಕ ಈ ಚಿತ್ರ ನಿರ್ಮಾಣವಾಗಲಿದ್ದು, ‘ಮಫ್ತಿ’ ರೀತಿಯಲ್ಲೇ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾಗೆ ಇದಾಗಿರಲಿದೆ. ‘ಮಫ್ತಿ’ ಸಿನಿಮಾದ ಶಿವಣ್ಣ ಅವರ ಪಾತ್ರದ ವಿಶೇಷತೆಗೆ ತಕ್ಕಂತೆ ಕಥೆ ಹೆಣೆಯುವ ಕಾರ್ಯ
ದಲ್ಲಿ ನಿರ್ದೇಶಕರು ತೊಡಗಿದ್ದಾರೆ ಎನ್ನಲಾಗಿದೆ.

ಸದ್ಯ ಶಿವಣ್ಣ ಅವರ ಕೈಯಲ್ಲಿ ‘ಕವಚ’, ‘ರುಸ್ತುಂ’ಗಳಿದ್ದು, ಅವುಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಲಕ್ಕಿ ಗೋಪಾಲ್ ನಿರ್ದೇಶನದ ‘ಎಸ್‌ಆರ್‌ಕೆ’ ಹಾಗೂ ಪ್ರಮೋದ್ ಚಕ್ರವರ್ತಿಯ ‘ದ್ರೋಣ’ ಸಿನಿಮಾದಲ್ಲೂ ನಟಿಸಲಿದ್ದಾರೆ. ಈ ಎಲ್ಲ ಚಿತ್ರಗಳ ನಂತರ ‘ಭೈರತಿ ರಣಗಲ್’ ಚಂದನವನದಲ್ಲಿ ಸದ್ದು ಮಾಡಲಿದೆಯಂತೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !