ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿರುವ ‘ಬಲರಾಮನ ದಿನಗಳು’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕೆ.ಎಂ.ಚೈತನ್ಯ ನಿರ್ದೇಶನದ ಚಿತ್ರ ಶೀಘ್ರದಲ್ಲಿ ತೆರೆ ಕಾಣಲಿದೆ.

‘ಸಿನಿಮಾ ಬಗ್ಗೆ ಜನ ಮಾತಾಡಬೇಕು ಹೊರತು, ನಾವು ಮಾತಾಡಬಾರದು. ಹೀಗಾಗಿ ಈ ಸಿನಿಮಾ ಬಗ್ಗೆ ಮಾತನಾಡಲು ಜನರಿಗೆ ಬಿಡುತ್ತೇನೆ. ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಜನ ಇಷ್ಟಪಟ್ಟರೆ ಅವರೇ ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆದಷ್ಟು ಬೇಗ ಚಿತ್ರ ತೆರೆಗೆ ಬರಲಿದೆ. ಹಲವರು ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಎನ್ನುತ್ತಾರೆ. ಆದರೆ ಚಿತ್ರಮಂದಿರಗಳಿಗೆ ಜನರನ್ನು ಕರೆಸುವ ತಾಕತ್ತು ಇರುವುದು ಸಿನಿಮಾಕ್ಕೆ ಮಾತ್ರ. ಸಿನಿಮಾ ಚೆನ್ನಾಗಿತ್ತು ಅಂದ್ರೆ, ಜನರನ್ನು ತಾನಾಗಿಯೇ ಕರೆದುಕೊಂಡು ಬರುತ್ತದೆ. ಅದಕ್ಕೆ ನಮ್ಮ ‘ಮಾದೇವ’ ಚಿತ್ರವೇ ಉದಾಹರಣೆ. ಸಿನಿಮಾಕ್ಕೆ ಜನ ಕರೆದುಕೊಂಡು ಬರುವುದು ಸುಲಭವಲ್ಲ. ಯಾವುದೇ ಗಿಮಿಕ್ಸ್ ಇಲ್ಲದೆ ಆ ಚಿತ್ರಕ್ಕೆ ಜನ ಬಂದರು. ಅದೇ ರೀತಿ ಈ ಸಿನಿಮಾಕ್ಕೂ ಜನ ಬರುತ್ತಾರೆ ಎಂಬ ನಂಬಿಕೆಯಿದೆ. ಇವತ್ತಿನ ಚಿತ್ರರಂಗದ ಸ್ಥಿತಿ ಗೊತ್ತೇ ಇದೆ. ಇಂಥ ಹೊತ್ತಿನಲ್ಲಿಯೂ ನಿರ್ಮಾಪಕರು ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡಿದ್ದಾರೆ. ಅವರಿಗೆ ಈ ಸಿನಿಮಾ ಖಂಡಿತ ದುಪ್ಪಟ್ಟು ಹಣ ವಾಪಾಸ್ ಕೊಡುತ್ತದೆ ಎಂಬ ನಂಬಿಕೆಯಿದೆ. ಚೈತನ್ಯ ಅವರು ತಾವು ಅಂದುಕೊಂಡಿದ್ದು ತೆರೆಯ ಮೇಲೆ ಬರಲೇಬೇಕು ಎಂಬ ವರ್ಗದ ನಿರ್ದೇಶಕ. ಬಹಳ ಬುದ್ಧಿವಂತ. ಆ್ಯಕ್ಷನ್ ಸಿನಿಮಾವನ್ನೂ ಕ್ಲಾಸ್ ಆಗಿ, ಕಲ್ಟ್ ಆಗಿ ಮಾಡಬಹುದು ಎಂದು ತೋರಿಸಿದ್ದಾರೆ’ ಎಂದರು ವಿನೋದ್ ಪ್ರಭಾಕರ್.

80ರ ದಶಕದ ಗ್ಯಾಂಗ್ಸ್ಟರ್ ಕಥೆಯಲ್ಲಿ ವಿನೋದ್ ಪ್ರಭಾಕರ್ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದ್ದಾರೆ. ಪದ್ಮಾವತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ನಾನು 18 ವರ್ಷಗಳ ಹಿಂದೆ ‘ಆ ದಿನಗಳು’ ಮಾಡಿದ್ದೆ. ಅದೇ ರೀತಿಯ ಸಿನಿಮಾ ಮಾಡಬೇಕು, ವಿನೋದ್ ಪ್ರಭಾಕರ್ ನಾಯಕರಾಗಿರಬೇಕು ಎಂದು ನಿರ್ಮಾಪಕರಾದ ಶ್ರೇಯಸ್ ಮತ್ತು ಪದ್ಮಾವತಿ ಅವರು ನನ್ನ ಬಳಿ ಬಂದರು. ಹೀಗಾಗಿ ಈ ಸಿನಿಮಾದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಬಹಳ ಅದ್ಭುತವಾಗಿ, ಮಹತ್ವಾಕಾಂಕ್ಷೆಯಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇಡೀ ತಂಡ ನನ್ನ ದೊಡ್ಡಶಕ್ತಿ. ಮುಂದಿನ ದಿನಗಳಲ್ಲಿ ಚಿತ್ರದ ಹಾಡುಗಳು, ಟ್ರೇಲರ್ ಬಿಡುಗಡೆಗೊಳ್ಳಲಿದೆ’ ಎಂದರು ನಿರ್ದೇಶಕ.

‘ಚಿತ್ರೋದ್ಯಮದಲ್ಲಿ ಕೆಲವರು ನಮ್ಮ ನಿರ್ದೇಶಕರು ಅಂತ ಇರುತ್ತಾರೆ. ಅವರು ಸಿನಿಮಾ ಮಾಡುತ್ತಾರೆ ಎಂದರೆ, ಆ ಸಿನಿಮಾದಲ್ಲಿ ನಾವು ಹಾಡು ಬರೆಯೋದು ಖಚಿತ. ಆ ಸಾಲಿನಲ್ಲಿ ಚೈತನ್ಯ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ರೌಡಿಸಂ ಕಥೆಯನ್ನು ಕೆಲವು ನಿರ್ದೇಶಕರ ಕೈಗೆ ಕೊಟ್ಟರೆ, ಅದೊಂದು ಮಾಸ್ ಸಿನಿಮಾ ಆಗುತ್ತದೆ. ಚೈತನ್ಯ ಅವರ ಕೈಗೆ ಕೊಟ್ಟರೆ ಕಲ್ಟ್ ಸಿನಿಮಾ ಆಗುತ್ತದೆ. ಅದಕ್ಕೆ ‘ಆ ದಿನಗಳು’ ಸಿನಿಮಾವೇ ಸಾಕ್ಷಿ. ಈ ಸಲ ಕಪ್ ನಮ್ದೆ ಎನ್ನುವ ರೀತಿ ಈ ಸಿನಿಮಾದಲ್ಲಿಯೂ ಅವರು ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಬಲವಾಗಿದೆ. ಚಿತ್ರದ ಕೆಲವಷ್ಟು ತುಣುಕುಗಳನ್ನು ನೋಡಿದ್ದೇನೆ. ವಿನೋದ್ ಪ್ರಭಾಕರ್ ತಮ್ಮ ಪಾತ್ರದಲ್ಲಿ ಮುಳುಗಿ ಹೋಗಿದ್ದಾರೆ. ಅವರಿಗೆ ಈ ಚಿತ್ರದಿಂದ ದೊಡ್ಡ ಯಶಸ್ಸು ಸಿಗಲಿ’ ಎಂದರು ಚಿತ್ರ ಸಾಹಿತಿ ಕವಿರಾಜ್.

‘ಚಿತ್ರೀಕರಣ ಕಾಲೇಜು ಟ್ರಿಪ್ನಂತೆ ಇತ್ತು. ನಿರ್ದೇಶಕರಿಗೆ ಎಲ್ಲರೂ ಭಯಪಡುತ್ತಿದ್ದೆವು. ಇವತ್ತು ಸಾಕಷ್ಟು ಸಿನಿಮಾಗಳಲ್ಲಿ ತಂಡದಲ್ಲಿ ಭಿನ್ನಾಭಿಪ್ರಾಯ ನೋಡುತ್ತಿದ್ದೇವೆ. ಆದರೆ ನಮ್ಮ ಸಿನಿಮಾದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಪಯಣ ಇದೊಂದೇ ಚಿತ್ರಕ್ಕೆ ಸೀಮಿತವಾಗಿರುವುದಿಲ್ಲ. ಇನ್ನಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದರು ನಿರ್ಮಾಪಕಿ.

ವೇಣು ಛಾಯಾಚಿತ್ರಗ್ರಹಣ, ಸಂತೋಷ್ ನಾರಾಯಣ್ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.