ಹಳೆ ಪ್ಯಾಂಟು; ಪತ್ತೆದಾರಿ ನಂಟು!

7

ಹಳೆ ಪ್ಯಾಂಟು; ಪತ್ತೆದಾರಿ ನಂಟು!

Published:
Updated:
Prajavani

ಅಟ್ಲಾಸ್‌ ಸೈಕಲ್‌, ದೀಪಾವಳಿ ಲಾಟರಿ, ಆಶಾ ಹೊಲಿಗೆ ಯಂತ್ರ, ಸ್ನೇಕ್‌ ಸೋಮಣ್ಣನ ಥ್ರಿಲ್ಲರ್ ಕಾದಂಬರಿ ಹೀಗೆ ಹಳೆಯ ಜಾಹೀರಾತು ಮಾದರಿಗಳನ್ನು ಇಟ್ಟುಕೊಂಡೇ ವಿಶಿಷ್ಟ ಪ್ರಮೋಶನ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ ಜಯತೀರ್ಥ ನಿರ್ದೇಶನದ ಸಿನಿಮಾ ‘ಬೆಲ್‌ ಬಾಟಂ’. ಟಿ.ಕೆ. ದಯಾನಂದ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಪತ್ತೆದಾರಿ ಕಥೆಯ ಎಳೆ ಹೊಂದಿರುವ ಈ ಸಿನಿಮಾ ಹಾಸ್ಯದ ರಸದೌತಣವನ್ನೂ ಬಡಿಸುವ ಸೂಚನೆಯನ್ನು ಟೀಸರ್‌ನಲ್ಲಿಯೇ ನೀಡಿದೆ. ‘ಏತಕೆ ಬೊಗಸೆ ತುಂಬ ಕನಸು ತುಂಬುವೆ’ ಎಂಬ ಹಾಡು ಈಗಾಗಲೇ ಕ್ರೇಜ್‌ ಹುಟ್ಟಿಸಿದೆ.

 * ಇದನ್ನೂ ಓದಿ: ಬೆಲ್‌ ಬಾಟಂ: ಹಳೆ ಪ್ಯಾಂಟು; ಮೀಮ್ಸ್‌ ಮಸ್ತ್‌ ಉಂಟು

ಬೆಲ್‌ ಬಾಟಂ ಪ್ಯಾಂಟು ಹಾಕಿಕೊಂಡು ಎಡವಟ್ಟು ಡಿಟೆಕ್ಟೀವ್‌ ರೂಪದಲ್ಲಿ ರಿಷಬ್‌ ಶೆಟ್ಟಿ ನಟಿಸಿರುವ ಈ ಚಿತ್ರದಲ್ಲಿ ಸೈಕಲ್ ತುಳಿಯುವ ದೊಡ್ಡ ತುರುಬಿನ ಹುಡುಗಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆಯೇ ಹೇಳುವ ಹಾಗೆ ‘ಬೆಲ್‌ ಬಾಟಂ’ ಪ್ಯಾಂಟುಗಳು ಕ್ರೇಜ್‌ ಹುಟ್ಟಿಸಿದ್ದ ದಿನದಲ್ಲಿ ನಡೆಯುವ ಸಿನಿಮಾ ಇದು. ಹಾಗಾಗಿ ಅದೇ ಕಾಲದಲ್ಲಿ ಚಾಲ್ತಿಯಲ್ಲಿದ್ದ ಜನಪ್ರಿಯ ಉತ್ಪನ್ನಗಳ ಜಾಹೀರಾತುಗಳನ್ನು ಈ ಚಿತ್ರದ ಪ್ರಮೋಷನ್‌ಗಾಗಿ ಬಳಸಿಕೊಳ್ಳಲಾಗಿದೆ. ಚಿತ್ರದ ತಾಂತ್ರಿಕ ವರ್ಗವನ್ನೂ ಅದೇ ಶೈಲಿಯಲ್ಲಿಯೇ ತಂಡ ಪರಿಚಯಿಸಿಕೊಡುತ್ತಿದೆ.

ಯೋಗರಾಜ್‌ ಭಟ್, ಶಿವಮಣಿ, ಪ್ರಮೋದ್ ಶೆಟ್ಟಿ, ಅಚ್ಯುತ್‌ ಕುಮಾರ್ ಸೇರಿದಂತೆ ಹಲವು ಘಟಾನುಘಟಿ ನಟರು ನಟಿಸಿರುವ ಈ ಸಿನಿಮಾ ಫೆ. 15ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಹಳೆಯ ಪ್ಯಾಂಟಿನ ಜತೆಗೆ ಹೊಸ ನಂಟನ್ನು ಬೆಸೆಯುವ ಪ್ರಯತ್ನದಂತೆ ಕಾಣಿಸುವ ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !