ಬುಧವಾರ, ಆಗಸ್ಟ್ 12, 2020
26 °C

ಕಲಾ ಸಹಾಯಕ ಲೋಕೇಶ್ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬೆಲ್ ಬಾಟಂ’ ಸಿನಿಮಾ ತಂಡದ ಕಲಾ ವಿಭಾಗದಲ್ಲಿ ಸಹಾಯಕ ಆಗಿ ಕೆಲಸ ಮಾಡಿದ್ದ ಲೋಕೇಶ್ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಲೋಕೇಶ್ ಅವರು ಖಿನ್ನತೆಗೆ ತುತ್ತಾಗಿದ್ದರು ಎಂದು ಗೊತ್ತಾಗಿದೆ. ಬೆಂಗಳೂರಿನಲ್ಲಿ ತಮ್ಮ ಕೊಠಡಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರ ಆಪ್ತರು ತಿಳಿಸಿದ್ದಾರೆ.

‘ಬಹಳ ಬೇಜಾರು ಆಗುತ್ತಿದೆ. ಜೀವನ ನಡೆಸುವುದು ಹೇಗೆ? ಲಾಕ್‌ಡೌನ್‌ ತೆರವಾಗಿ ಮುಂದೆ ಎಲ್ಲವೂ ಸರಿಹೋಗಲಿದೆಯೇ ಎಂದು ಅವರು ತಮ್ಮ ಕೆಲವು ಸ್ನೇಹಿತರ ಬಳಿ ಕೇಳುತ್ತಿದ್ದರು. ಅವರಿಗೆ ಒಂಟಿತನ ಕಾಡುತ್ತಿತ್ತು. ಲಾಕ್‌ಡೌನ್‌ ಕಾರಣದಿಂದಾಗಿ ಕೆಲಸ, ಆದಾಯ ಇರಲಿಲ್ಲ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು