‘ಬೆಲ್‌ ಬಾಟಂ’ ತೆರೆಗೆ ಸಿದ್ಧ

7

‘ಬೆಲ್‌ ಬಾಟಂ’ ತೆರೆಗೆ ಸಿದ್ಧ

Published:
Updated:

ರಿಷಬ್‌ ಶೆಟ್ಟಿ ಮತ್ತು ಹರಿಪ್ರಿಯಾ ನಾಯಕ, ನಾಯಕಿಯಾಗಿ ನಟಿಸಿರುವ ‘ಬೆಲ್‌ ಬಾಟಂ’ ಚಿತ್ರ ಫೆಬ್ರುವರಿ 15ರಂದು ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ. ಎಂಬತ್ತರ ದಶಕದಲ್ಲಿ ನಡೆಯುವ ಪತ್ತೆದಾರಿ ಕಥೆ ಇದು. ಪತ್ತೆದಾರಿ ತಂತ್ರಗಳು, ಪಾತ್ರಗಳು, ವೇಷಭೂಷಣ ಎಲ್ಲವೂ ಆ ಕಾಲಕ್ಕೆ ಸೇರಿರುವುದು ಈ ಚಿತ್ರದ ಮುಖ್ಯಾಂಶ. 

ಟಿ.ಕೆ. ದಯಾನಂದ ಅವರ ಕಥೆಗೆ ಜಯತೀರ್ಥ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಡಿಟೆಕ್ಟಿವ್‌ ದಿವಾಕರ ಮತ್ತು ಬೆಲ್‌ ಬಾಟಂಗೆ ಸಂಬಂಧವಿದೆಯಂತೆ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ರೆಟ್ರೋ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಪ್ರಮೋದ್‍ ಶೆಟ್ಟಿ ಬಣ್ಣಹಚ್ಚಿದ್ದಾರೆ.

ಮೂಡಿ ನಂಜಪ್ಪ, ಗೂಬೆ ಖಾನ್, ಮರಕುಟುಕ, ಸಗಣಿ ಖಾನ್, ರೇಡಿಯೊ ರಾಜ್ ಹೀಗೆ ಈ ಸಿನಿಮಾದ ಪಾತ್ರಗಳು ಜೀವ ತಳೆದಿವೆ. ನಾಯಕ ಡಿಟೆಕ್ಟಿವ್ ದಿವಾಕರ ಒಂದು ಕೇಸ್‍ ಅನ್ನು ಯಾವ ರೀತಿ ತನಿಖೆ ನಡೆಸುತ್ತಾನೆ ಎನ್ನುವುದು ಥ್ರಿಲ್‌ ಆಗಿ ಕಟ್ಟಿಕೊಡಲಾಗಿದೆಯಂತೆ. ಹಳೆಯ ಉತ್ಪನ್ನಗಳ ಭಾವಚಿತ್ರಗಳನ್ನು ಬಳಸಿಕೊಂಡು ಚಿತ್ರದ ಪ್ರಚಾರ ಕಾರ್ಯ ಆರಂಭಿಸಲಾಗಿದೆ. 

ನಾಲ್ಕು ಹಾಡುಗಳಿಗೆ ಬಿ. ಅಜನೀಶ್‍ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ ಸನ್ನಿವೇಶಕ್ಕೆ ಅಗತ್ಯವಿರುವ ಸಂಭಾಷಣೆಗಳನ್ನು ಹರಿಕಥೆಯ ಡೈಲಾಗ್‍ ಆಲಿಸಿ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕೆ.ಸಿ. ಸಂತೋಷ್‍ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬನವಾಸಿ, ಶಿವಮೊಗ್ಗ, ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !