ಬೆಂಗಳೂರು: ವರನಟ ರಾಜ್ಕುಮಾರ್ ಅವರ ಸಮಾಧಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್ ಮಾಡಿ, ನಂತರ ಕ್ಷಮೆ ಕೇಳಿದ್ದ ನಟ ಚೇತನ್ ‘ನನ್ನ ಮಾತಿನಲ್ಲಿ ಸತ್ಯವಿದೆ. ಹೇಳಿದ ವಿಷಯಕ್ಕೆ ಬದ್ಧನಾಗಿದ್ದೇನೆ’ ಎಂದು ಭಾನುವಾರ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿರುವ ಚೇತನ್, ‘ನಾನೂ ರಾಜ್ಕುಮಾರ್ ಅವರ ಅಭಿಮಾನಿ. ಆದರೆ ಅಭಿಮಾನಿ ಸಂಘದ ಪಟ್ಟ ಕಟ್ಟಿಕೊಂಡು ದಬ್ಬಾಳಿಕೆ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ. ಕಾನೂನುಬದ್ಧವಾಗಿರುತ್ತೇವೆ, ನಮ್ಮ ವಿಚಾರಗಳನ್ನು ಎತ್ತಿಹಿಡಿಯುತ್ತೇವೆ. ನಾನು ಯಾರ ಭಾವನೆಗಳಿಗಾದರೂ ಧಕ್ಕೆ ತಂದಿದ್ದರೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿ. ಅದನ್ನು ಎದುರಿಸಲಿದ್ದೇನೆ’ ಎಂದಿದ್ದಾರೆ.

‘ನಾನು ‘ಎಕ್ಸ್’ ಖಾತೆಯಲ್ಲಿ ಹಾಕಿದ ವಿಷಯಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದೆ. ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಕಾರಣಕ್ಕೆ ನಾನು ಹೇಳಿದ್ದು ಸುಳ್ಳು ಆಗುವುದಿಲ್ಲ. ನಾನು ಹೇಳಿದ್ದರಲ್ಲಿ ಸತ್ಯ ಇದೆ. ನಾನು ಹೇಳಿದ ವಿಷಯಕ್ಕೆ ಬದ್ಧನಾಗಿದ್ದೇನೆ. ಆದರೆ ಯಾರಿಗಾದರೂ ನೋವಾಗಿದ್ದರೆ, ಅದು ನನ್ನ ಉದ್ದೇಶವಲ್ಲ. ರಾಜ್ಕುಮಾರ್ ಅವರು ಬದುಕಿದ್ದಾಗ ಯಾರಾದರೂ ಸ್ಮಾರಕಕ್ಕೆ ಎರಡೂವರೆ ಎಕರೆ ಜಾಗ ಕೊಡುತ್ತೇನೆ ಎಂದಿದ್ದರೆ ಬೇಡ ಎನ್ನುತ್ತಿದ್ದರು. ಇದು ಪ್ರಚಾರಕ್ಕಾಗಿ ಎತ್ತಿದ ವಿಷಯವಲ್ಲ. ವಿಚಾರಕ್ಕಾಗಿ ಎತ್ತಿದ ವಿಷಯ. ನನಗೆ ಅಣ್ಣಾವ್ರ ಕುಟುಂಬದ ಬಗ್ಗೆ, ಅಭಿಮಾನಿಗಳ ಬಗ್ಗೆ ತಕರಾರಿಲ್ಲ. ರಾಜ್ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-16-16493115

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.