ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಮೇ 24ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಅವಳ ಹೆಜ್ಜೆ...’ ಕಿರುಚಿತ್ರೋತ್ಸವದಲ್ಲಿ ಆಯ್ದ ಕಿರುಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದೆ.

ವಿಜೇತ ಕಿರುಚಿತ್ರಕ್ಕೆ ₹1 ಲಕ್ಷ ನಗದು ಬಹುಮಾನ ಘೋಷಿಸಲಾಗುವುದು ಎಂದು ಟ್ರಸ್ಟ್ನ ಅಧ್ಯಕ್ಷೆ ಮಾಳವಿಕಾ ಗುಬ್ಬಿವಾಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚಿತ್ರೋತ್ಸವವು ಮಹಿಳಾ ನಿರ್ದೇಶಕಿಯರಿಗಾಗಿ ಮೀಸಲಾಗಿದೆ. ಸಂಗೀತಾ ನಂಜುಂಡಸ್ವಾಮಿ, ದೀಪ್ತಿ ಮೂರ್ತಿ ಅಯ್ಯರ್, ಸುಮನಾ ಚಂದ್ರಗಿರಿ ಅವರನ್ನು ಒಳಗೊಂಡ ತೀರ್ಪುಗಾರರ ತಂಡವು ‘ಕಾಶಿ ಕೈಲಾಸ, ಸೋರುತಿಹುದು ಮನೆಯ ಮಾಳಿಗೆ, ರೊಟ್ಟಿ, ಎ ಲಿಟ್ಲ್ ಕೇರ್, ಹುಲಿಯಪ್ಪ, ದಾರಿ, ಮೌನರಾಗ, ಆ ಮಾಡಿ, ಗೆಜ್ಜೆ, ನಿತ್ಯ’ ಎಂಬ10 ಕಿರುಚಿತ್ರಗಳನ್ನು ಆಯ್ಕೆ ಮಾಡಿದೆ’ ಎಂದರು.

ಅವಳ ಹೆಜ್ಜೆ ಕಿರುಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲೆ ಮಾತನಾಡಿ, ‘ಕಿರು ಚಿತ್ರೋತ್ಸವದಲ್ಲಿ ಸಿನಿಮಾದಲ್ಲಿ ಅವಳ ಹೆಜ್ಜೆ: ‘ಅ’ ಯಿಂದ ‘ಅಃ’ವರೆಗೆ ವಿಷಯಾಧಾರಿತ ಚರ್ಚಾಗೋಷ್ಠಿ ನಡೆಯಲಿದ್ದು, ನೀತೂ ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ, ಸಂಜೋತಾ ಭಂಡಾರಿ ಪಾಲ್ಗೊಳ್ಳಲಿದ್ದಾರೆ. ಪ್ರಥಮ ಸ್ಥಾನ ಪಡೆದ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ ಹಾಗೂ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು. ಆಯ್ದ ಕೆಲವು ಕಿರುಚಿತ್ರಗಳಿಗೆ ₹10 ಸಾವಿರ ಬಹುಮಾನ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-4-1320392235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.