ಧರ್ಮ ಕೀರ್ತಿರಾಜ್ ಅಭಿನಯದ ‘ಬೆಂಗಳೂರು ಇನ್’ ಸಿನಿಮಾ ಏ.17ರಂದು ತೆರೆಕಾಣಲಿದೆ.

ಬೆಂಗಳೂರಿನಲ್ಲಿ ನಡೆಯುವ ಕೊಲೆ ಪ್ರಕರಣದ ಸುತ್ತ ಈ ಸಿನಿಮಾವಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯುಳ್ಳ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಒಬ್ಬ ಫುಡ್ ಡೆಲಿವರಿ ಏಜೆಂಟ್ನ ಕಥೆ ಇಲ್ಲಿದ್ದು, ಕಾರ್ತಿಕ್ ಕೆ. ಮೂರ್ತಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ರಿಷಾ ಗೌಡ ಮತ್ತು ಅನುಷಾ ರೈ ಮುಖ್ಯಭೂಮಿಕೆಯಲ್ಲಿದ್ದಾರೆ. ನಟ ಶಶಿಕುಮಾರ್ ಚಿತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಪಾತ್ರದಲ್ಲಿ ನಟಿಸಿದ್ದಾರೆ. ಅನುಷಾ ರೈ ವರದಿಗಾರ್ತಿಯಾಗಿ ಅಭಿನಯಿಸಿದ್ದಾರೆ.

‘ನಿಜ ಜೀವನದ ಒಂದು ಘಟನೆ ಈ ಚಿತ್ರದ ಕಥೆ ಬರೆಯಲು ಸ್ಫೂರ್ತಿ ನೀಡಿತು. ಈ ಸಿನಿಮಾದಲ್ಲಿ ಪೋಷಕರಿಗೆ ಒಂದು ಸಂದೇಶವಿದೆ. ಜೊತೆಗೆ ಕಮರ್ಷಿಯಲ್ ಅಂಶಗಳು ಮತ್ತು ಮನರಂಜನೆಯೂ ಇದೆ’ ಎನ್ನುತ್ತಾರೆ ಕಾರ್ತಿಕ್.

‘ನಾನೆಂದೂ ಕುಗ್ಗಿಲ್ಲ, ಯಶಸ್ಸು ಸಿಕ್ಕಲಿಲ್ಲ ಎನ್ನುವ ಬೇಸರವೂ ಇಲ್ಲ. ಕೆಲ ಸಿನಿಮಾಗಳ ಸೋಲಿನ ನಂತರ ನಾನು ಚೆನ್ನೈನಲ್ಲಿ ವಾಸವಾಗಿದ್ದೆ. ‘ಚಾಣಾಕ್ಷ’ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದೇ ಸಿನಿಮಾ ನಿರ್ಮಾಪಕರು ‘ಚಾಣಾಕ್ಷ’ ಸಿನಿಮಾ ಮಾಡಿದ್ದರು. ಈ ಸಿನಿಮಾದ ಕಥೆ ಅದಕ್ಕಿಂತ ವಿಭಿನ್ನವಾಗಿದೆ. ಚಿತ್ರದಲ್ಲಿ ನಾನು ಪಿಜ್ಜಾ ಡೆಲಿವರಿ ಹುಡುಗನಾಗಿ ನಟಿಸಿದ್ದೇನೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಕನಸು ಇರುವ ಹುಡುಗನೀತ. ಇದರಲ್ಲೊಂದು ಪ್ರೇಮಕಥೆಯೂ ಇದೆ’ ಎಂದರು ಧರ್ಮ.

ಚಿತ್ರವನ್ನು ವೆಂಕಟೇಶಮೂರ್ತಿ ನಿರ್ಮಾಣ ಮಾಡಿದ್ದಾರೆ. ನವೀನ್ ಪಂಚಾಕ್ಷರಿ ಛಾಯಾಚಿತ್ರಗ್ರಹಣ, ಅಸಿಫ್ ಎ. ಕಾದರ್, ಅರವಿಂದ್ ಮುರಳಿ ಸಂಗೀತ, ಕುಮಾರ್ ಸಿ.ಕೆ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.