ಬೆಂಗಳೂರು: ‘ರಾಜ್ಕುಮಾರ್ ಅವರು ನಟನೆ, ಭಾಷಾ ಪ್ರಯೋಗಗಳ ವಿಶಿಷ್ಟತೆಯಿಂದ ಬುದ್ಧಿ ಜೀವಿಗಳೂ ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಸಿನಿಮಾದ ಕಡೆ ಆಕರ್ಷಿಸಿದರು’ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡ ಜನಶಕ್ತಿ ಕೇಂದ್ರವು ಕನ್ನಡ ಭವನದ ನಯನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಟಿ ಗಿರಿಜಾ ಲೋಕೇಶ್ ಅವರಿಗೆ ವರನಟ ಡಾ.ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಸಾಮಾನ್ಯವಾಗಿ ಕಲಾತ್ಮಕ ಚಿತ್ರಗಳ ಬಗ್ಗೆ ಮಾತ್ರ ಬುದ್ಧಿಜೀವಿಗಳು ಯೋಚಿಸುತ್ತಿರುವಾಗ, ರಾಜ್ಕುಮಾರ್ ಅವರು ಕರ್ನಾಟಕದ ಜನಪ್ರಿಯ ಸಂಸ್ಕೃತಿಗೆ ಹೊಸ ವ್ಯಾಖ್ಯಾನ ಬರೆದರು. ಈ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿವೆ’ ಎಂದು ತಿಳಿಸಿದರು.‘ರಂಗಭೂಮಿ ಮತ್ತು ಸಿನಿಮಾ ದೃಷ್ಟಿಯಿಂದ 1970 ಮತ್ತು 1980ರ ದಶಕ ಸುವರ್ಣ ಕಾಲವಾಗಿತ್ತು. ಚೋಮನದುಡಿ, ಭುಜಂಗಯ್ಯನ ದಶಾವತಾರ, ಸಂಸ್ಕಾರ, ವಂಶವೃಕ್ಷ ಮೊದಲಾದ ಕನ್ನಡದ ಕೃತಿಗಳು ಚಲನಚಿತ್ರಗಳಾದ ಕಾಲಘಟ್ಟವದು. ಅಂಥ ಕೃತಿಗಳಿಗೆ ಜೀವ ತುಂಬುವ ಕೆಲಸವನ್ನು ಗಿರಿಜಾ ಲೋಕೇಶ್ ಅಚ್ಚು ಕಟ್ಟಾಗಿ ಮಾಡಿದ್ದರು. ರಂಗಭೂಮಿಯಲ್ಲೂ ಛಾಪು ಮೂಡಿಸಿದ್ದಾರೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಗಿರಿಜಾ ಲೋಕೇಶ್ ಮಾತನಾಡಿ, ‘ರಾಜ್ಕುಮಾರ್ ಅವರಂತಹ ಶ್ರೇಷ್ಠ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅವರ ಕುಟುಂಬದೊಂದಿಗೆ ಒಡನಾಟವೂ ಇತ್ತು. ಅವರದ್ದೇ ಹೆಸರಿನ ಪ್ರಶಸ್ತಿಯನ್ನು ನನಗೆ ನೀಡಿರುವುದಕ್ಕೆ ಹೆಮ್ಮೆಯಿದೆ‘ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ‘ರಾಜ್ಕುಮಾರ್ ಅವರು ರಾಷ್ಟ್ರಮಟ್ಟದ ಅತ್ಯುತ್ತಮ ಕಲಾವಿದ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಅವರಿಗೆ ದೊರೆತ ಗೌರವ ನೋಡಿ ಮನ ತುಂಬಿ ಬಂದಿತು. ಈಗಲೂ ಚಳವಳಿಗಳಲ್ಲಿ ನಾನು ಗಟ್ಟಿಯಾಗಿರಲು ಅವರೇ ಕಾರಣ. ಒಂದೇ ಒಂದು ಕಪ್ಪು ಚುಕ್ಕೆ ಬಾರದ ಹಾಗೆ ಹೋರಾಟಗಳನ್ನು ರೂಪಿಸಿಕೊಂಡು ಬಂದಿದ್ದೇವೆ’ ಎಂದರು.

ಗಿರಿಜಾ ಲೋಕೇಶ್ ಅವರು ಅಭಿಜಾತ ಕಲಾವಿದೆ. ಅವರ ಕುಟುಂಬ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಹಲವು ಕಲಾವಿದರನ್ನು ಬೆಳೆಸಿ ಆಶ್ರಯ ನೀಡಿದೆ. ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲೂ ಹೆಸರು ಮಾಡಿದ ಗಿರಿಜಾ ಅವರಿಗೆ ಪ್ರಶಸ್ತಿ ನೀಡಿದ್ದು ಗೌರವ ಹೆಚ್ಚಿಸಿದೆ ಎಂದು ಹೇಳಿದರು.

ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ, ಸಲಹೆಗಾರ ಪಿ.ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-4-2091339855

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.