ಡಬ್ಬಿಂಗ್ ಮುಗಿಸಿದ ಬೆಟ್ಟದ ದಾರಿ

7

ಡಬ್ಬಿಂಗ್ ಮುಗಿಸಿದ ಬೆಟ್ಟದ ದಾರಿ

Published:
Updated:

ಹೀರಾಲಾಲ್ ಮೂವೀಸ್ ಲಾಂಛನದಲ್ಲಿ ಚಂದ್ರಕಲಾ ಟಿ.ಆರ್. ಹಾಗೂ ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ‘ಬೆಟ್ಟದ ದಾರಿ’ ಚಿತ್ರದ ಧ್ವನಿಮುದ್ರಣ ಕಾರ್ಯ ಈಚೆಗೆ ಮುಗಿದಿದೆ. ಸರ್ಕಾರದಿಂದಲೂ ಬಗೆಹರಿಸಲು ಸಾಧ್ಯವಿಲ್ಲ ಎನ್ನುವಂತಹ ನೀರಿನ ಸಮಸ್ಯೆಯನ್ನು ಐವರು ಹುಡುಗರು ಹೇಗೆ ಪರಿಹರಿಸುತ್ತಾರೆ ಎನ್ನುವುದು ಈ ಚಿತ್ರದ ಪ್ರಧಾನ ಕಥೆ.

‘ಬಂಗಾರಿ’ ಮತ್ತು ‘ಶಿವನ ಪಾದ’ ಸಿನಿಮಾ ನಿರ್ದೇಶಿಸಿರುವ ಮಾ. ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ಅರ್ಜುನ್ (ಕಿಟ್ಟಿ) ಸಂಕಲನ, ಡಾ. ವಿ. ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಹಾಗೂ ವಿಜಯ್ ಭರಮಸಾಗರ ಸಾಹಿತ್ಯ ಇದೆ.

ನಿಶಾಂತ್ ಟಿ. ರಾಥೋಡ್, ರಂಗನಾಥ್ ಯಾದವ್, ರೋಹಿತ್, ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್, ಮನದೀಪ್ ರಾಯ್, ರಮೇಶ್ ಭಟ್, ಉಮೇಶ್, ಮೈಸೂರು ಮಲ್ಲೇಶ್, ಆರ್. ನಾಗೇಶ್, ರಿಕ್ಕಿ, ಅಂಜಲಿ, ಮಂಜುಳಾ ರೆಡ್ಡಿ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

‘ಚರಂತಿ’ ಮೊದಲ ಪ್ರತಿ ಸಿದ್ಧ

 ರಾವಲ್ ಸಿನಿ ಫೋಕಸ್ ಲಾಂಛನದಲ್ಲಿ ಪರಶುರಾಮ್ ರಾವಲ್ ನಿರ್ಮಾಣದ ‘ಚರಂತಿ’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಚಿತ್ರದ ಕಥೆ, ನಿರ್ದೇಶನ ಮಹೇಶ್ ರಾವಲ್ ಅವರದ್ದು. ಅವಿನಾಶ್ ಬಿ ಸಂಗೀತ, ಶಿವಾಜಿ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಮಹೇಶ್ ರಾವಲ್, ಸಚಿನ್ ಪುರೋಹಿತ್, ಆಲ್‍ಮಾಸ್, ರೇಖಾದಾಸ್, ಎಂ.ಎನ್. ಸುರೇಶ್, ವಿಜಯ್, ಸದಾನಂದ ಕಾಳೆ, ರಾಜಪ್ಪ ದಳವಾಯಿ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !