ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ನಲ್ಲಿ ‘ಭಾಗ್ ಬೀನಿ ಭಾಗ್‌’

Last Updated 3 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಈ ವೆಬ್‌ಸರಣಿಯು ಮಹತ್ವಾಕಾಂಕ್ಷೆಯುಳ್ಳ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಯುವತಿಯೊಬ್ಬಳ ಕಥೆ. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಬೀನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಸ್ವರ ಭಾಸ್ಕರ್‌. ಬೀನಿ ತನ್ನ ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ತನಗೆ ನಿಶ್ಚಯವಾದ ವರನೊಂದಿಗೆ ಆರಾಮದಾಯಕ ಜೀವನ ತ್ಯಜಿಸಿ ಓಡಿ ಹೋಗುವ ಕಥೆಯನ್ನು ಈ ಸರಣಿ ಹೊಂದಿದೆ. ಆಕೆಗೆ ನಿಶ್ಚಯವಾಗುವ ಹುಡುಗನ ಪಾತ್ರದಲ್ಲಿ ವರುಣ್ ಠಾಕೂರ್ ನಟಿಸಿದ್ದಾರೆ. ಬೀನಿಯ ಕನಸಿಗೆ ಒಪ್ಪದ ಪೋಷಕರು, ಪುರುಷಪ್ರಧಾನ ಸಮಾಜದಲ್ಲಿ ಆಕೆ ಎದುರಿಸುವ ಸವಾಲುಗಳು, ತನ್ನ ಪ್ರತಿ ಹೆಜ್ಜೆಯಲ್ಲೂ ಧೈರ್ಯಗೆಡಿಸುವ ಜನರು ಈ ಎಲ್ಲಾ ಅಂಶಗಳನ್ನು ದಾಟಿ ಆಕೆ ಹೇಗೆ ತನ್ನ ದಾರಿಯಲ್ಲಿ ಸಾಗುತ್ತಾಳೆ ಎಂಬುದನ್ನು ಈ ವೆಬ್‌ಸರಣಿ ತೋರಿಸಲಿದೆ. ಇದು ಇಂದು (ಡಿ.4) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಆದಿತ್ಯಾ ಬೆಲ್ನೇಕರ್‌, ಹೆತ್ವಿ ಕರಿಯ, ರವಿ ಪಾಟೀಲ್‌, ಡಾಲಿ ಸಿಂಗ್‌, ಮೋನಾ ಅಂಬೆಗಾಂವ್ಕರ್‌, ಗಿರೀಶ್ ಕುಲಕರ್ಣಿ ಮೊದಲಾದವರು ನಟಿಸಿದ್ದಾರೆ. ಡೆಬ್ಬಿ ರಾವ್‌, ಇಶಾನ್ ನಾಯರ್‌, ಅಭಿ ವರ್ಗಿಸ್ ಈ ಸರಣಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈ ಹಿಂದೆ ಫ್ಲೆಶ್‌, ರಾಸ್‌ಭರಿ ಮುಂತಾದ ವೆಬ್‌ಸರಣಿಗಳಲ್ಲಿನ ತಮ್ಮ ವಿಭಿನ್ನ ಪಾತ್ರದ ಮೂಲಕ ಸ್ವರ ಭಾಸ್ಕರ್‌ ಪ್ರೇಕ್ಷಕರನ್ನು ರಂಜಿಸಿದ್ದರು.

ಲಾಹೋರ್ ಕಾನ್ಫಿಡೆನ್ಷಿಯಲ್‌

ರಿಚಾ ಛಡ್ಡಾ ಹಾಗೂ ಅರುಣೋದಯ್ ಸಿಂಗ್ ಮುಖ್ಯಪಾತ್ರದಲ್ಲಿ ನಟಿಸಿರುವ ಲಾಹೋರ್ ಕಾನ್ಫಿಡೆನ್ಷಿಯಲ್ ಡಿಸೆಂಬರ್‌ 11ಕ್ಕೆ ಜೀ5ನಲ್ಲಿ ಬಿಡುಗಡೆಯಾಗಲಿದೆ.

ಅನನ್ಯಾ ಎಂಬ ಭಾರತೀಯ ಗುಪ್ತದಳದ ಏಜೆಂಟ್ ಭಯೋತ್ಪಾದಕರನ್ನು ಪತ್ತೆ ಮಾಡುವ ಉದ್ದೇಶದಿಂದ ಪಾಕಿಸ್ತಾನಕ್ಕೆ ತೆರಳುತ್ತಾಳೆ. ಅಲ್ಲಿ ರೌಫ್ ಎಂಬ ಐಎಸ್‌ಐ ಏಜೆಂಟ್‌ನನ್ನು ಭೇಟಿಯಾಗುತ್ತಾಳೆ. ಪರಸ್ಪರ ಹಿನ್ನೆಲೆ ತಿಳಿದಿರದ ಈ ಇಬ್ಬರ ನಡುವೆ ಪ್ರೀತಿ ಅಂಕುರವಾಗುತ್ತದೆ. ಗಡಿಯಾಚೆಗಿನ ಉದ್ವಿಗ್ನತೆಯ ನಡುವೆ ಅವರ ಪ್ರೇಮಕಥೆ ಪ್ರವರ್ಧಮಾನಕ್ಕೆ ಬರುತ್ತದೆ. ಕೊನೆಗೊಂದು ದಿನ ಇಬ್ಬರಿಗೂ ಅವರ ಹಿನ್ನೆಲೆ ತಿಳಿಯುತ್ತದೆ. ಹೀಗೆ ತಮ್ಮ ಪ್ರೇಮಿಯ ನಿಜರೂ‍ಪ ತಿಳಿದಾಗ ಅವರ ಪ್ರೀತಿಯಲ್ಲಿ ಏನಾಗುತ್ತದೆ? ಇಬ್ಬರೂ ದೇಶಪ್ರೇಮಕ್ಕೆ ಬೆಲೆ ಕೊಡುತ್ತಾರಾ ಅಥವಾ ತಮ್ಮಿಬ್ಬರ ನಿಸ್ವಾರ್ಥ ಪ್ರೀತಿಗೋಸ್ಕರ ದೇಶಪ್ರೇಮವನ್ನು ದೂರ ಮಾಡುತ್ತಾರಾ ಎಂಬುದನ್ನೆಲ್ಲಾ ತಿಳಿಯಲು ಈ ವೆಬ್‌ಸರಣಿಯನ್ನು ನೋಡಬೇಕು.

ಈ ಸರಣಿಯಲ್ಲಿ ಕರೀಶ್ಮಾ ತನ್ನಾ ಹಾಗೂ ಖಾಲಿದ್ ಸಿದ್ಧಿಕಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT