ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ್ ಕುಮಾರ್ ‘ಭೈರತಿ ರಣಗಲ್’ ಪೋಸ್ಟರ್ ಅನಾವರಣ

Last Updated 6 ಮಾರ್ಚ್ 2023, 10:56 IST
ಅಕ್ಷರ ಗಾತ್ರ

ಬೆಂಗಳೂರು: ‘ವೇದ’ ಚಿತ್ರದ ನಂತರ ಗೀತಾ ಫಿಕ್ಚರ್ಸ್ ನಿರ್ಮಾಣದಲ್ಲಿ ನಟ ಶಿವರಾಜಕುಮಾರ್ ಅವರ 'ಬೈರತಿ ರಣಗಲ್' ಎಂಬ ಪ್ಯಾನ್ ಇಂಡಿಯಾ ಚಿತ್ರ ಘೋಷಣೆಯಾಗಿತ್ತು.

ಇದೀಗ ಬೈರತಿ ರಣಗಲ್ ಚಿತ್ರದ ಪ್ಯಾನ್ ಇಂಡಿಯಾ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಕನ್ನಡ, ಹಿಂದೆ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ನಿರೀಕ್ಷೆಯಂತೆ ಈ ಸಿನಿಮಾವನ್ನು ಮಫ್ತಿ ಖ್ಯಾತಿಯ ನರ್ತನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಗೀತಾ ಫಿಕ್ಚರ್ಸ್ ಹಣ ಹೂಡಿದೆ.

ಶಿವರಾಜಕುಮಾರ್ ಅವರ 126 ನೇ ಚಿತ್ರವಾದ ‘‘ಭೈರತಿ ರಣಗಲ್’ ’ ಮಫ್ತಿ ಸಿನಿಮಾದ ಫ್ರಿಕ್ವೆಲ್ ಆಗಿದೆ ಎಂಬುದು ತಿಳಿದು ಬಂದಿದೆ. ಇದನ್ನು ಹೊರತಪಡಿಸಿದರೆ ಚಿತ್ರತಂಡ ತಾರಾಗಣ, ಸಿಬ್ಬಂದಿಯ ಇತರೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚಿತ್ರಕಥೆ ಅಂತಿಮವಾಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ ಎಂದು ನಿರ್ದೇಶಕ ನರ್ತನ್ ಅವರು ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಗೀತಾ ಫಿಕ್ಚರ್ಸ್ ಸಂಸ್ಥೆಯ ಎರಡನೇ ಸಿನಿಮಾ ಬೈರತಿ ರಣಗಲ್ ಅಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT