ಶನಿವಾರ, ಆಗಸ್ಟ್ 24, 2019
28 °C

ಡಿಜಿಟಲ್‌ ವೇದಿಕೆಗೆ ಅಲಿ ಅಬ್ಬಾಸ್‌ನ ‘ತಾಂಡವ್‌’

Published:
Updated:

‘ಭಾರತ್‌’ ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್‌ ಜಾಫರ್‌ ಅವರು ಡಿಜಿಟಲ್‌ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ. ಸಲ್ಮಾನ್‌ ಖಾನ್‌ ನಟನೆಯ ‘ಭಾರತ್‌’ ಸಿನಿಮಾ ಒಂದೇ ವಾರದಲ್ಲಿ ನೂರು ಕೋಟಿ ಕ್ಲಬ್‌ ಸೇರಿಕೊಂಡಿತ್ತು. ಆ ಸಿನಿಮಾ ಖ್ಯಾತಿಯ ನಿರ್ದೇಶಕ ಅಲಿ ಅಬ್ಬಾಸ್‌ ಅವರು ಸದ್ಯದಲ್ಲೇ ‘ತಾಂಡವ್‌’ ಎಂಬ ವೆಬ್‌ ಸರಣಿಯೊಂದನ್ನು ನಿರ್ದೇಶನ ಮಾಡಲಿದ್ದಾರೆ. 

ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ರಾಜಕೀಯ ಥ್ರಿಲ್ಲರ್‌ ಕತೆ ಈ ಸರಣಿಯದ್ದು. ಇದರಲ್ಲಿ ಸೈಫ್‌ ಅಲಿಖಾನ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, 2020ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 

ಈ ವೆಬ್‌ ಸರಣಿಯ ಚಿತ್ರಕತೆ ಅಂತಿಮ ಹಂತದಲ್ಲಿದೆ. ಈ ಸರಣಿಯ ಇತರ ಪಾತ್ರಗಳ ಬಗ್ಗೆ  ಮಾಹಿತಿಯನ್ನು ಚಿತ್ರತಂಡ ಹೊರಹಾಕಿಲ್ಲ. 

ಇನ್ನು ಅಲಿ ಅಬ್ಬಾಸ್‌ ಅವರು ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. ಅನನ್ಯಾ ಪಾಂಡೆ ಹಾಗೂ ಇಶಾನ್‌ ಖಟ್ಟರ್‌ ಜೋಡಿಯಾಗಿ ನಟಿಸುತ್ತಿರುವ ಹೊಸ ರೊಮ್ಯಾಂಟಿಕ್‌ ಪ್ರೇಮಕತೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ವರ್ಷಾಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ತಮ್ಮದೇ ಹೋಮ್‌ ಪ್ರೊಡಕ್ಷನ್‌ನ ಈ ಚಿತ್ರಕ್ಕೆ ಅಲಿಯವರದೇ ಚಿತ್ರಕತೆ, ಸಂಭಾಷಣೆ. 

ಅಲಿ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಎರಡನೇ ವಾರದಲ್ಲಿ ₹100 ಕೋಟಿ ಕ್ಲಬ್‌ ಸೇರಿದೆ. ‘ಗುಂಡೇ’, ‘ಸುಲ್ತಾನ್‌’, ‘ಟೈಗರ್‌ ಜಿಂದಾ ಹೈ’ ಸಿನಿಮಾಗಳು ಇದಕ್ಕೆ ಸಾಕ್ಷಿ. ಭಾರತ್‌ ಸಿನಿಮಾ ಸಹ ₹211 ಕೋಟಿ ಗಳಿಕೆ ಮಾಡಿದೆ.

Post Comments (+)