ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋರಿ’ಯ ಜವಾರಿ ಹಾಡು‘ಬ್ಯಾರೆನೆ ಐತಿ’ಗೆ ಬಿಂದಾಸ್ ಪ್ರತಿಕ್ರಿಯೆ

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಗೋರಿ ಸಿನಿಮಾದ ‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಜವಾರಿ ಹಾಡು ಯುಟ್ಯೂಬ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಹಾಡಿಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ.

‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಹಾಡನ್ನು ಶಿವು ಬೇರ್ಗಿ ಬರೆದಿದ್ದಾರೆ. ಹಾಸ್ಯ ನಟ ಶರಣ್‌ ಅಭಿನಯದ ರ‍್ಯಾಂಬೊ2 ಚಿತ್ರದಲ್ಲಿ ‘ಚುಟು ಚುಟು’ ಎಂಬ ಜವಾರಿ ಹಾಡು ಕೂಡ ಸಾಕಷ್ಟು ಸದ್ದು ಮಾಡಿತ್ತು. ಈಗ ಗೋರಿ ಸಿನಿಮಾದಲ್ಲೂ ಒಂದು ಜವಾರಿ ಹಾಡನ್ನು ಸೇರಿಸಲಾಗಿದೆ. ಇದರ ಜತೆಗೆ ‘ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ’ ಹಾಡನ್ನು ಟಿವಿ ವರದಿಗಾರ ಎಂ.ಎಚ್‌. ಜಗ್ಗಿನ್‌, ‘ನೀನಿರದೆ’ ಹಾಡನ್ನು ಚಿತ್ರ ಸಾಹಿತಿ ಕೆ. ಕಲ್ಯಾಣ್‌ ರಚಿಸಿದ್ದಾರೆ. ನಾಲ್ಕು ಹಾಡುಗಳು ಕೇಳಲು ಹಿತಕರವಾಗಿವೆ. ಈ ಹಾಡುಗಳಿಗೆ ವಿನು ಸಂಗೀತ ಸಂಯೋಜನೆ ಮಾಡಿದ್ದಾರೆ.

ಹುಡುಗಿಯೊಬ್ಬಳು ಹುಡುಗನನ್ನು ನೋಡಿ ನಕ್ಕರೆ ಅಥವಾ ಹುಬ್ಬು ಹಾರಿಸಿದರೆ ಅದು ಬ್ಯಾರೆನೆ ಐತಿ ಎಂದು ಹಾಡಿನ ಉದ್ದಕ್ಕೂ ಹೇಳಲಾಗಿದೆ. ಕಾಲೇಜು ದಿನಗಳಲ್ಲಿನ ಯುವಕ ಯುವತಿಯರ ಪ್ರೇಮ ನಿವೇದನೆಯನ್ನು ಈ ಹಾಡು ನೆನಪಿಸುತ್ತದೆ.

ಇದೇ ಹಾಡಿನ ಲಿರಿಕಲ್‌ ಸಾಂಗ್‌ ಕೂಡ ಈ ಹಿಂದೆ ಬಿಡುಗಡೆಯಾಗಿತ್ತು. ಅದಕ್ಕೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವುಜಾತಿ– ಧರ್ಮಕ್ಕಿಂತ ಪ್ರೀತಿ ಮಿಗಿಲಾದುದು, ಪ್ರೀತಿಗಿಂತ ಮಾನವೀಯತೆ ಮಿಗಿಲಾದುದು ಎಂಬ ಸಂದೇಶ ನೀಡಲು ಈ ಸಿನಿಮಾ ಮಾಡಿದ್ದೇವೆ ಎಂದು ಚಿತ್ರತಂಡ ಹೇಳಿದೆ.

ಸದ್ಯ ಚಿತ್ರವು ಡಿಟಿಎಸ್ ಹಂತದಲ್ಲಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿಯ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಚಿತ್ರ ತಂಡ ತೊಡಗಿದೆ.

ಸುದ್ದಿವಾಹಿನಿಯಲ್ಲಿ ವರದಿಗಾರನಾಗಿರುವಕಿರಣ್‌ ಹಾವೇರಿನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿರುವ ನಟ–ನಟಿಯರು, ಕಲಾವಿದರು ಮತ್ತು ತಂತ್ರಜ್ಞರೆಲ್ಲರೂ ಉತ್ತರಕರ್ನಾಟಕದವರು ಎನ್ನುವುದು ವಿಶೇಷ. ಚಿತ್ರದಲ್ಲೂ ಉತ್ತರ ಕರ್ನಾಟಕದ ಸೊಗಡು, ಭಾಷೆ ವಿಜೃಂಭಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT