ಆಲಿಯಾ ಭಟ್ ಅವರ ‘ಆಲ್ಫಾ’ ಚಿತ್ರದ ಗೂಢಾಚಾರಿ ಪಾತ್ರದ ಬಗ್ಗೆ ಬಾಲಿವುಡ್ ನಟ ಬಾಬಿ ಡಿಯೋಲ್ ಅವರು ಕೊಂಡಾಡಿದ್ದಾರೆ.

ಈ ಕುರಿತು ಮಾತನಾಡಿರುವ ಬಾಬಿ ಡಿಯೋಲ್, ‘ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ಅವರು ಗೂಢಾಚಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಇಬ್ಬರು ಆಕ್ಷನ್ ಸಿನಿಮಾವನ್ನು ಮುನ್ನಡೆಸುವ ಬಗ್ಗೆ ತುಂಬಾ ಖುಷಿ ಇದೆ’ ಎಂದು ಹೇಳಿಕೊಂಡಿದ್ದಾರೆ.

'ಈ ನಟಿಯರು 'ಆಲ್ಫಾ' ಚಿತ್ರದ ಮೂಲಕ ತೆರೆಯ ಮೇಲೆ ಭರ್ಜರಿ ಆಕ್ಷನ್ ಮೋಡಿ ಮಾಡಲಿದ್ದಾರೆ. ಗೂಢಚಾರಿ ಪಾತ್ರದಲ್ಲಿ ಮಹಿಳೆಯರು ನಟಿಸುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯಕರ ಸಂಗತಿ. ಈ ಸಿನಿಮಾ ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆಯಲಿದೆ. ಭಿನ್ನವಾದ ಈ ಚಿತ್ರದ ಕಥೆ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ಇದೆ' ಎಂದು ಹೇಳಿದ್ದಾರೆ.

‘ನನಗೆ ರಣಬೀರ್ ಮತ್ತು ಆಲಿಯಾ ಎಂದರೆ ತುಂಬಾ ಇಷ್ಟ. ಅವರಿಬ್ಬರ ಜೊತೆ ಕೆಲಸ ಮಾಡಬೇಕೆಂದು ನಾನು ಬಯಸಿದ್ದೆ. ರಣಬೀರ್ ಜೊತೆ ನಾನು 'ಅನಿಮಲ್' ಚಿತ್ರದಲ್ಲಿ ನಟಿಸಿದ್ದೆ. ಈಗ ಆಲಿಯಾ ಜೊತೆ 'ಆಲ್ಫಾ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಜೋಡಿ ಜೊತೆ ಕೆಲಸ ಮಾಡಿದ ಕ್ಷಣ ತುಂಬಾ ಅದ್ಭುತವಾಗಿತ್ತು‘ ಎಂದಿದ್ದಾರೆ.

ಆಲಿಯಾ ಅವರು ಒಂದು ಪಾತ್ರ ನೈಜ್ಯವಾಗಿ ಮೂಡಿ ಬರಲು ಸಾಕಷ್ಟು ಪರಿಶ್ರಮ ಹಾಕುತ್ತಾರೆ. ಅವರು ಚಿತ್ರೀಕರಣದ ಸೆಟ್ಗೆ ಬರುವಾಗಲೇ ಸಂಪೂರ್ಣವಾಗಿ ಸಿದ್ಧರಾಗಿ ಬರುತ್ತಾರೆ. ಅವರು ಹಿಂದೆ ಎಂದಿಗೂ ಈ ರೀತಿಯ ಪಾತ್ರಗಳನ್ನು ಮಾಡಿರಲಿಲ್ಲ. ಈ ಚಿತ್ರದಲ್ಲಿನ ಗೂಢಾಚಾರಿ ಪಾತ್ರಕ್ಕೆ ಅವರು ಸಂಪೂರ್ಣ ಜೀವ ತುಂಬಿದ್ದಾರೆ’ ಎಂದು ಬಾಬಿ ಡಿಯೋಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.