ಸೋಮವಾರ, ಜುಲೈ 4, 2022
23 °C

ಮೀ-ಟೂನಿಂದ ‘ಸೂಪರ್‌ 30’ ಮುಂದಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಲಿವುಡ್‌ನ ಗ್ರೀಕ್‌ ಗಾಡ್‌ ಹೃತಿಕ್‌ ರೋಷನ್ ಪ್ರಸ್ತುತ ‘ಸೂಪರ್ 30’ ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಗಣಿತಜ್ಞ ಮತ್ತು ಶಿಕ್ಷಣ ತಜ್ಞ ಆನಂದ್ ಕುಮಾರ್ ಜೀವನಾಧಾರಿತ ಚಿತ್ರ ಇದು. ಈ ಚಿತ್ರವನ್ನು ನಿರ್ದೇಶಿಸುತ್ತಿರುವ ನಿರ್ದೇಶಕ ವಿಕಾಸ್ ಬಲ್‌ ಅವರ ಮೇಲೆ, ಮೀ ಟೂ ಅಭಿಯಾನದ ಅಂಗವಾಗಿ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು ಅವರನ್ನು ನಿರ್ದೇಶಕ ಸ್ಥಾನದಿಂದ ತೊಲಗಿಸಿದ್ದಾರೆ. 

ಚಿತ್ರಕ್ಕೆ ಸಂಬಂಧಿಸಿದ ಪ್ರಮುಖ ಭಾಗಗಳೆಲ್ಲಾ ಈಗಾಗಲೇ ಪೂರ್ಣಗೊಂಡಿವೆ. ಆದರೆ ಕೆಲವು ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಆಗಬೇಕಿದೆ. ಮತ್ತೊಂದು ಕಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಆರಂಭವಾಗಿಲ್ಲ. ಹೀಗಾಗಿ ಅಂದುಕೊಂಡ ದಿನಕ್ಕೆ ಸಿನಿಮಾ ಬಿಡುಗಡೆಯಾಗುತ್ತದೆಯೇ ಎಂಬ ಅನುಮಾನುಗಳು ಕಾಡುತ್ತಿವೆ. 

ಇದೇ ಜನವರಿ 24ರಂದು ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ಹೇಳಿತ್ತು. ಆದರೆ ಈ ಡೆಡ್‌ಲೈನ್‌ ಒಳಗೆ ಚಿತ್ರವನ್ನು ಬಿಡುಗಡೆ ಮಾಡುವುದು ಕಷ್ಟ, ಹೀಗಾಗಿ ಚಿತ್ರ ಬಿಡುಗಡೆಯಾಗುವುದು ತಡವಾಗಬಹುದು ಎಂದು ಹೇಳಲಾಗುತ್ತಿದೆ.

ಅರ್ಧಕ್ಕೆ ನಿಂತಿರುವ ಈ ಚಿತ್ರವನ್ನು ಪೂರ್ಣಗೊಳಿಸಲು ನಿರ್ಮಾಪಕರಾದ ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ ಅವರು ಮೊತ್ವಾನೇಯವರು ಬೇರೆ ನಿರ್ದೇಶಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಹೊಸ ನಿರ್ದೇಶಕ ಕೆಲಸ ಆರಂಭಿಸುವವರೆಗೂ ಯಾವ ಕೆಲಸವೂ ಸಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು