ಮಿಂಚುತಿವೆ ಈ ತಾರಾ ಕುಡಿಗಳು

7

ಮಿಂಚುತಿವೆ ಈ ತಾರಾ ಕುಡಿಗಳು

Published:
Updated:
Deccan Herald

ಮೊದಲ ಚಿತ್ರ ತೆರೆ ಕಾಣುವುದಕ್ಕೂ ಮೊದಲೇ ಮತ್ತೊಂದು ಚಿತ್ರದಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಬಂದರೆ, ಖುಷಿಗೆ ಮಿತಿಯೇ ಇರುವುದಿಲ್ಲ. ಇನ್ನೂ ಸ್ವಲ್ಪ ಹುಷಾರಾಗಿ ನಟಿಸಬಹುದು, ಕುಣಿಯಬಹುದು. ಪ್ರಸ್ತುತ ಇಂತಹ ಅಪರೂಪದ ಅವಕಾಶಗಳನ್ನು ಪಡೆದಿರುವ ನಾಲ್ವರು ನಟಿಯರು ಇಲ್ಲಿದ್ದಾರೆ.

ತಾರಾ ಆನಂದ
ಪ್ರಸ್ತುತ ಸ್ಟೂಡೆಂಟ್‌ ಆಫ್‌ ದಿ ಇಯರ್ –2 ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ತಾರಾ ಸುತಾರಿಯಾಗೆ ತೆಲುಗಿನ ‘ಅರ್ಜುನ್‌ ರೆಡ್ಡಿ’ ಚಿತ್ರದ ರಿಮೇಕ್‌ ‘ಕಬೀರ್‌ ಸಿಂಗ್‌’ನಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಬಿಡುವಿಲ್ಲದ್ದರಿಂದ ನಿರಾಕರಿಸಿದರು. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ರಿತೇಶ್ ದೇಶ್‌ಮುಖ್‌ ನಟಿಸುತ್ತಿರುವ ಮಿಲಾಪ್‌ ಜವೇರಿ ನಿರ್ದೇಶನದ ಚಿತ್ರದಲ್ಲಿ ತಾರಾಗೆ ಉತ್ತಮ ಪಾತ್ರವೇ ದೊರೆತಿದೆ. ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ದಿ ಇಯರ್–2 ಚಿತ್ರದಲ್ಲಿ  ಟೈಗರ್ ಶ್ರಾಫ್ ಜೊತೆಗೆ ನಟಿಸುತ್ತಿದ್ದಾರೆ.

ಮೊದಲ ಚಿತ್ರ ಎರಡನೇ ಚಿತ್ರವಾಯಿತು
ಕೇದಾರ್‌ನಾಥ್ ಚಿತ್ರ ತೆರೆ ಕಾಣುವ ಮೊದಲೇ ಅಪರೂಪದ ಅವಕಾಶವೊಂದು ಸೈಫ್ ಅಲಿಖಾನ್ ಮಗಳು ಸಾರಾ ಅಲಿಖಾನ್‌ಗೆ ಹುಡುಕಿಕೊಂಡು ಬಂದಿದೆ. ಎರಡನೇ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ ರಣವೀರ್‌ಸಿಂಗ್ ಅವರ ಜತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ.

ತೆಲುಗಿನಲ್ಲಿ ಭರ್ಜರಿ ಹಿಟ್ ಸಾಧಿಸಿದ ಜೂನಿಯರ್ ಎನ್‌ಟಿಆರ್ ನಟನೆಯ ‘ಟೆಂಪರ್‌’ನ  ಹಿಂದಿ ಅವತರಣಿಕೆಯಾದ ‘ಸಿಂಬಾ’ ಚಿತ್ರದಲ್ಲಿ ರಣವೀರ್ ಮತ್ತು ಸಾರಾ ಅಲಿಖಾನ್ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೇದಾರ್‌ನಾಥ್ ಚಿತ್ರಕ್ಕೂ ಮೊದಲು ಸಿಂಬಾ ಚಿತ್ರವೇ ತೆರೆಕಾಣುವ ಸಾಧ್ಯತೆ ಇದೆ. ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲೇ ತೆರೆಕಾಣಬಹುದು ಎಂದು ಹೇಳಲಾಗುತ್ತಿದೆ. ಆದರೆ ಕೇದಾರ್‌ನಾಥ್ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡತ್ತಲೇ ಬರುತ್ತಿದ್ದು, ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ಎರಡು ಭಾಷೆಗಳು
ಯಾವುದಾದರೂ ಒಂದು ಚಿತ್ರರಂಗದಲ್ಲಿ ಸಿನಿಮಾ ತೆರೆಕಂಡು, ಅದರಲ್ಲಿ ಹೀರೊಯಿನ್ ಚೆನ್ನಾಗಿ ಅಭಿನಯಿಸಿದ್ದಾಳೆ ಎಂಬ ಮಾತುಗಳು ಕೇಳಿಬಂದ ನಂತರವಷ್ಟೇ ಇತರೆ ಚಿತ್ರರಂಗಗಳಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ತೆಲುಗಿನ ಆ್ಯಂಗ್ರಿ ಯಂಗ್ ಮ್ಯಾನ್‌ ರಾಜಶೇಖರ್ ಮತ್ತು ಜೀವಿತಾ ದಂಪತಿಯ ಪುತ್ರಿ ಶಿವಾನಿ ಅವರನ್ನು ಎರಡು ಚಿತ್ರರಂಗಗಳಿಂದ ಅವಕಾಶಗಳು ಹುಡುಕಿಕೊಂಡು ಬಂದಿವೆ.

ಶಿವಾನಿ ನಟಿಸುತ್ತಿರುವ ‘2 ಸ್ಟೇಟ್ಸ್’ ಚಿತ್ರ ತೆರೆ ಕಾಣುವ ಮುನ್ನವೇ ತಮಿಳು ಚಿತ್ರರಂಗದಿಂದ ಅವರಿಗೆ ಕರೆ ಬಂದಿದೆ. ತಮಿಳಿನ ವಿಷ್ಣು ವಿಶಾಲ್‌ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ‘2–ಸ್ಟೇಟ್ಸ್’ ಚಿತ್ರದಲ್ಲಿ ಗೂಢಚಾರಿ ಸಿನಿಮಾದ ನಾಯಕ ಅಡವಿ ಶೇಷ್ ನಾಯಕನಟನಾಗಿ ನಟಿಸುತ್ತಿದ್ದಾರೆ. ವೆಂಕಟ್‌ರೆಡ್ಡಿ ನಿರ್ದೇಶನದ ಈ ಚಿತ್ರ ಹಿಂದಿ ‘2–ಸ್ಟೇಟ್ಸ್‌’ ಚಿತ್ರದ ರಿಮೇಕ್.

ಅಪರೂಪದ ಅವಕಾಶ
ಬಾಲಿವುಡ್‌ನಲ್ಲಿ ನಟಿಸಿದ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡದಿದ್ದರೂ, ತೆಲುಗಿನ ಅಕ್ಕಿನೇನಿ ನಾಗಚೈತನ್ಯ ನಟನೆಯ ‘ಸವ್ಯಸಾಚಿ’ ಸಿನಿಮಾದಲ್ಲಿ ನಟಿಸುವ ಅವಕಾಶ ನಟಿ ನಿಧಿ ಅಗರ್‌ವಾಲ್‌ ಅವರನ್ನು ಹುಡುಕಿಕೊಂಡು ಬಂತು. ಈ ಸಿನಿಮಾ ನವೆಂಬರ್‌ನಲ್ಲಿ ತೆರೆಕಾಣಲಿದೆ.

ಈ ಚಿತ್ರ ಬಿಡುಗಡೆಗೂ ಮುನ್ನವೇ ‘ಮಿಸ್ಟರ್ ಮಜ್ನು’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ವಿಶೇಷವೆಂದರೆ ಈ ಚಿತ್ರದ ನಾಯಕ ನಾಗಚೈತನ್ಯ ಅವರ ತಮ್ಮ ಅಕ್ಕಿನೇನಿ ನಿಕಿಲ್‌. ಈ ಚಿತ್ರವನ್ನು ವೆಂಕಿ ಅಟ್ಲೂರಿ ನಿರ್ದೇಶಿಸುತ್ತಿದ್ದು, ಡಿಸೆಂಬರ್‌ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ಈ ಎರಡೂ ಚಿತ್ರಗಳಲ್ಲಿ ನಿಧಿ ಅವರ ನಟನೆಗೆ ಒಳ್ಳೆಯ ಅಂಕಗಳು ದೊರತರೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರಬಹುದು. ಅವರು ಹಿಂದಿಯ ‘ಮುನ್ನಾ ಮೈಕೆಲ್’ ಚಿತ್ರದಲ್ಲಿ ನಟಿಸಿದ್ದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !