ಶುಭಾಶಯದೊಂದಿಗೆ ಅಮಿತಾಭ್ ಹಾಗೂ ಜಯ ಜೋಡಿಯ ಇತ್ತೀಚಿನ ಫೋಟೊ ಒಂದನ್ನು ಟ್ಯಾಗ್ ಮಾಡಿದ್ದಾರೆ. ಕಪ್ಪು ಜಾಕೆಟ್ ಹಾಗೂ ಬಿಳಿ ಕುರ್ತಾದೊಂದಿಗೆ ಅಮಿತಾಭ್ ಮಿಂಚಿದ್ದಾರೆ. ಹಳದಿ ಬಣ್ಣದ ಡ್ರೆಸ್ನಲ್ಲಿ ಜಯಾ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಗುಡ್ಡಿ, ಏಕ್ ನಜರ್, ಬಾವರ್ಚಿ, ಶೋಲೆ, ಕಬಿ ಖುಷಿ ಕಬಿ ಘಮ್, ಅಭಿಮಾನ್, ಚುಪ್ಕೆ ಚುಪ್ಕೆ ಸಿನಿಮಾಗಳಲ್ಲಿಈ ಜೋಡಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿತ್ತು. 1973ರಲ್ಲಿ ಈ ಜೋಡಿ ವಿವಾಹವಾಗಿತ್ತು. ಅದಾದ ಒಂದು ತಿಂಗಳಲ್ಲಿ ಅಮಿತಾಭ್ ನಟನೆಯ ಜಂಜೀರ್ ಸಿನಿಮಾ ಬಿಡುಗಡೆಗೊಂಡಿತ್ತು.