ಬುಧವಾರ, ಆಗಸ್ಟ್ 21, 2019
22 °C

ಇಸಾಬೆಲ್ಲಾ ಬಾಲಿವುಡ್‌ಗೆ ಎಂಟ್ರಿ

Published:
Updated:
Prajavani

ಬಾಲಿವುಡ್ ನಟಿ ಕತ್ರೀನಾ ಕೈಫ್ ಸಹೋದರಿ ಇಸಾಬೆಲ್ಲಾ ಕೈಫ್ ಬಾಲಿವುಡ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಆಯುಷ್‌ ಶರ್ಮಾ ನಾಯಕನಟನಾಗಿ ನಟಿಸುತ್ತಿರುವ ‘ಕ್ವಾಥಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಆಯುಷ್‌ ಕಳೆದ ವರ್ಷ ಬಿಡುಗಡೆಯಾಗಿದ್ದ ‘ಲವ್‌ಯಾತ್ರಿ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಅವರು ಸಲ್ಮಾನ್‌ ತಂಗಿ ಅರ್ಪಿತಾ ಖಾನ್ ಪತಿ. ಈ ಸಿನಿಮಾವನ್ನು ಸಲ್ಮಾನ್‌ ಖಾನ್‌ ನಿರ್ಮಾಣ ಮಾಡಿದ್ದರು.

ನ್ಯೂಯಾರ್ಕ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಸಾಬೆಲ್ಲಾ ನಟನೆ ತರಬೇತಿ ಪಡೆಯುತ್ತಿದ್ದರು. ಕೆನಡಿಯನ್‌ ಸಿನಿಮಾ ‘ಡಾ. ಕ್ಯಾಬ್ಬಿ’ ಯಲ್ಲಿ ನಟಿಸಿದ್ದರು. ಇದರ ಸಹ– ನಿರ್ಮಾಪಕರೂ ಸಲ್ಮಾನ್‌ ಖಾನ್.

‘ಕ್ವಾಥಾ’ ಸಿನಿಮಾದಲ್ಲಿ ಆಯುಷ್‌ ಸೇನಾಧಿಕಾರಿಯಾಗಿ ನಟಿಸಲಿದ್ದಾರೆ. ಕರಣ್‌ ಲಲಿತ್‌ ಭೂತಾನಿ ನಿರ್ದೇಶನ ಈ ಚಿತ್ರಕ್ಕಿದೆ. ಕ್ವಾಥಾ ಎಂಬುದು ಭಾರತ ಹಾಗೂ ಮ್ಯಾನ್ಮಾರ್‌ ದೇಶಗಳ ಗಡಿಪ್ರದೇಶದ ಸಣ್ಣ ಗ್ರಾಮ. ಸೇನೆಯಲ್ಲಿನ ಸತ್ಯ ಘಟನೆಗಳನ್ನೇ ಆಧರಿಸಿದ ದೃಶ್ಯಗಳು ಈ ಸಿನಿಮಾದಲ್ಲಿವೆ ಎಂದು ಭೂತಾನಿ ಹೇಳಿದ್ದಾರೆ.

ಕಲ್ಟ್‌ ಎಂಟರ್‌ಟೇನ್‌ಮೆಂಟ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

Post Comments (+)