ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಇಂದು (ಶನಿವಾರ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ಹಿಂದಿ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶುಭ ಕೋರಿರುವ ಅಮಿತಾಭ್ ಬಚ್ಚನ್, ‘ಹುಟ್ಟುಹಬ್ಬಕ್ಕೆ ಉಡುಗೊರೆ ಕೇಳಬಾರದು. ಹುಟ್ಟುಹಬ್ಬವನ್ನು ಕೆಲಸ ಮಾಡುವ ಮೂಲಕ ಉತ್ತಮಗೊಳಿಸಬೇಕು. ಅಭಿಷೇಕ್‌ಗೆ ಜನ್ಮದಿನದ ಶುಭಾಶಯಗಳು. ‘ಘೂಮರ್’ ಚಿತ್ರಕ್ಕೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
‘ನನ್ನ ಪ್ರೀತಿಯ ಸಹೋದರನಿಗೆ ಜನ್ಮದಿನದ ಶುಭಾಶಯಗಳು. ಆಲ್ ದಿ ಬೆಸ್ಟ್’ ಎಂದು ಅಭಿಷೇಕ್ ಬಚ್ಚನ್ ಅವರ ಸಹೋದರಿ ಶ್ವೇತಾ ಬಚ್ಚನ್ ಶುಭ ಹಾರೈಸಿದ್ದಾರೆ.
ಫೆಬ್ರುವರಿ 5, 1976ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ಅಭಿಷೇಕ್, 2000ರಲ್ಲಿ ‘ರೆಫ್ಯೂಜಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ‘ಧೂಮ್’, ‘ಗೇಮ್’, ಹೌಸ್‌ಫುಲ್, ‘ಹ್ಯಾಪಿ ನ್ಯೂ ಇಯರ್’, ‘ದಿ ಬಿಗ್ ಬೂಲ್’ ಚಿತ್ರಗಳಲ್ಲಿ ನಟಿಸಿದ್ದಾರೆ.