ಭಾನುವಾರ, ಅಕ್ಟೋಬರ್ 25, 2020
27 °C

ಬಿರಾದಾರ್‌ಗೆ ಅಮಿತಾಬ್‌ರಿಂದ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Vaijanath Biradar and amitabh bachchan

ಸಿನಿಮಾಗಳಲ್ಲಿ ಕುಡುಕ, ಭಿಕ್ಷುಕನಂತಹ ಪಾತ್ರಗಳಲ್ಲಿ ಸಹಜವಾಗಿ ನಟಿಸುವ, ಹರಿದ ಮಾಸಿದ ಬಟ್ಟೆಯಲ್ಲಿಯೇ ಪಾತ್ರಕ್ಕೆ ಮೆರಗು ನೀಡುವ ಕಲಾವಿದ ಬಿರಾದಾರ್‌ ಅವರು ಈಗ ಲಿವಿಂಗ್ ಲೆಜೆಂಡ್ ಅಮಿತಾಬ್ ಬಚ್ಚನ್‌ರ ಮನಗೆದ್ದಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ‌‌ ‘ಕನಸೆಂಬ ಕುದುರೆಯೇರಿ’ ಸಿನಿಮಾದಲ್ಲಿನ ನಟನೆಗಾಗಿ ಬಿರಾದಾರ್‌ ಅವರಿಗೆ ಸ್ಪೇನ್‌ನ ಮ್ಯಾಡ್ರಿಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಈ ವಿಷಯ ಅಷ್ಟು ದೊಡ್ಡ ಸುದ್ದಿಯಾಗಲಿಲ್ಲ. ಆದರೆ ಬಾಲಿವುಡ್ ಬಿಗ್‌ಬಿ ಅಮಿತಾಬ್ ಅವರಿಗೆ ವಿಷಯ ತಲುಪಿತ್ತು. ಕೂಡಲೇ ವೈಜನಾಥ ಬಿರಾದಾರ್‌ ಅವರಿಗೆ ಕರೆ ಮಾಡಿದ್ದ ಅಮಿತಾಬ್‌ ‘ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ದೊರಕಿದ್ದು ನಮಗೆ ಹೆಮ್ಮೆ’ ಎಂದು ಅಭಿನಂದಿಸಿದ್ದಾರೆ.

ಬಿರಾದಾರ್ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘90 ಹೊಡಿ ಮನೀಗ್ ನಡಿ’ ಇವರ ನಟನೆಯ 500ನೇ ಚಿತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು