ಮುಂಬೈ: ಬಾಲಿವುಡ್ನ ಹಿರಿಯ ನಟ ಭರತ್ ಕಪೂರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಭರತ್ ಕಪೂರ್ ಮೂವರು ಮಕ್ಕಳನ್ನು ಅಗಲಿದ್ದಾರೆ.

ಇತ್ತೀಚೆಗೆ ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮಧ್ಯಾಹ್ನ 3.30ಕ್ಕೆ ಹೃದಯಾಘಾತಕ್ಕೆ ಒಳಗಾಗಿ ಪ್ರಾಣಬಿಟ್ಟರು ಎಂದು ಕಪೂರ್ ಕುಟುಂಬದವರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಭರತ್ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ಪೋಷಕ ನಟ, ಖಳ ನಟರಾಗಿ ಹೆಚ್ಚು ಗುರುತಿಸಿಕೊಂಡಿದ್ದರು. ‘ಹಿಂದೂಸ್ತಾನ್ ಕಿ ಕಸಮ್’, ‘ಸೊನೇ ಪೆ ಸುಹಾಗ್’, ‘ಬಲಿದಾನ್’ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಗಮನ ಸೆಳೆದಿತ್ತು.

‘ಬರಸಾತ್’ ‘ಆಕ್ರಿ ರಸ್ತಾ’, ‘ರಾಮ್ ಭೈರಾಮ್’, ‘ನೂರಿ’, ‘ಇಂಕಾರ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಖಳನಟರಾಗಿ ಅಭಿನಯಿಸಿದ್ದರು.
.ಬಾಲಿವುಡ್ನ ಹಿರಿಯ ನಟ ರಾಜೀವ್ ಕಪೂರ್ ನಿಧನ.ಬಾಲಿವುಡ್ನ ಹಿರಿಯ ಪೋಷಕ ನಟ ದೇವ್ ಮುಖರ್ಜಿ ನಿಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.