ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ಖ್ಯಾತ ನಟ ಮಿಥಿಲೇಶ್ ಚತುರ್ವೇದಿ ನಿಧನ

Last Updated 4 ಆಗಸ್ಟ್ 2022, 8:40 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಖ್ಯಾತ ಪೋಷಕ ನಟಮಿಥಿಲೇಶ್ ಚತುರ್ವೇದಿ (Mithilesh Chaturvedi) ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾದರು ಎಂದು ಅವರಅಳಿಯ ಆಶಿಶ್ ಚತುರ್ವೇದಿ ಸಾಮಾಜಿಕ ಜಾಲತಾಣಗಳ ಮೂಲಕ ಖಚಿತಪಡಿಸಿದ್ದಾರೆ. ಲಖನೌದಲ್ಲಿ ಮಕ್ಕಳ ಜತೆ ವಾಸವಾಗಿದ್ದರು ಎಂದು ಸಿನಿಮಾರಂಗದ ಅವರ ಸ್ನೇಹಿತರು ಹೇಳಿದ್ದಾರೆ.

ಮಿಥಿಲೇಶ್ ಚತುರ್ವೇದಿ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬಾಲಿವುಡ್‌ ಸೆಲೆಬ್ರಿಟಿಗಳು ಕೂಡ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ಚಿತ್ರರಂಗ ಸೇರಿದಂತೆ ರಂಗಭೂಮಿಯಲ್ಲಿ ಅವರ ಸಕ್ರಿಯರಾಗಿದ್ದರು. ಹಲವು ಜಾಹೀರಾತುಗಳು, ವೆಬ್‌ ಸರಣಿಗಳಲ್ಲೂ ಅವರು ನಟಿಸಿದ್ದರು.

‘ತಾಲ್’, ‘ಗದ್ದರ್: ಏಕ್ ಪ್ರೇಮ್ ಕಥಾ’, ‘ಕೋಯಿ ಮಿಲ್ ಗಯಾ’, ‘ಬಂಟಿ ಔರ್ ಬಬ್ಲಿ’, ‘ಗಾಂಧಿ ಮೈ ಫಾದರ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT