ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ತಾರೆಯರ ಕ್ವಾರೆಂಟೈನ್‌ ಕ್ಷಣಗಳು

Last Updated 1 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಲಾಕ್‌ಡೌನ್ ಕಾರಣದಿಂದ ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಹೀಗಾಗಿ ತಾರೆಯರು ಮನೆಯಲ್ಲಿಯೇ ಕುಳಿತು ಮೋಜು ಮಾಡುತ್ತಿದ್ದಾರೆ. ವರ್ಕೌಟ್ ಮಾಡುವುದು, ಮನೆಗೆಲಸ ಮಾಡುವುದು, ಮನೆಯೊಳಗೇ ಆಟ ಆಡುವುದು, ಸ್ಕಿನ್‌ಕೇರ್‌ ರೆಸಿಪಿ ಮುಂತಾದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ಅಷ್ಟೇ ಅಲ್ಲ ಆ ದೃಶ್ಯಗಳನ್ನು ಸೆರೆ ಹಿಡಿದು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಕಸ ಗುಡಿಸಿದ ಶಿಲ್ಪಾ ಶೆಟ್ಟಿ

ಮನೆ ಕೆಲಸದವರು ಬರುತ್ತಿಲ್ಲ. ಎಲ್ಲಾ ಕೆಲಸ ನಾವೇ ಮಾಡಬೇಕು, ಮನೆಗೆಲಸದಲ್ಲೂ ಒಳ್ಳೆಯ ವ್ಯಾಯಮವಾಗುತ್ತದೆ ಎನ್ನುವ ಶಿಲ್ಪಶೆಟ್ಟಿ ತಮ್ಮ ಮನೆಯ ಗಾರ್ಡನ್‌ನಲ್ಲಿ ಬಿದ್ದ ಎಲೆ ಹಾಗೂ ಕಸವನ್ನು ಗುಡಿಸುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇವರ ಈ ವಿಡಿಯೊಗೆ ಕಮೆಂಟ್‌ ಮಾಡಿರುವ ನೆಟ್ಟಿಗರು, ‘ಹೌದು ನಿಮ್ಮ ಮನೆಗೆಲಸಗಳನ್ನು ಮಾಡಲು ಇದು ಸೂಕ್ತ ಸಮಯ. ಈಗಲಾದರೂ ನಿಮ್ಮ ಮನೆಯ ಕೆಲಸಗಳನ್ನು ಮಾಡಿ’ ಎಂದಿದ್ದಾರೆ.

ಸ್ಕಿನ್‌ ಕೇರ್ ಫೋಟೊ ಹಂಚಿಕೊಂಡ ದೀಪಿಕಾ ರಣವೀರ್:

‘ಕೋವಿಡ್‌–19 ಲಾಕ್‌ಡೌನ್‌ ಸಮಯವನ್ನು ಉಪಯೋಗಿಸಿಕೊಳ್ಳಿ. ಇಷ್ಟು ದಿನ ಕೆಲಸ, ಓಡಾಡದ ನಡುವೆ ನಿಮ್ಮನ್ನು ನೀವು ಕಾಳಜಿ ಮಾಡಲು ಸಾಧ್ಯವಾಗದಿದ್ದರೆ ಈಗ ಮಾಡಿ’ ಎಂದು ಚರ್ಮ ರಕ್ಷಣೆ, ಎಜರ್ಜಿ ಡ್ರಿಂಗ್ ಬಗ್ಗೆ ಟಿಪ್ಸ್‌ ನೀಡಿದ್ದಾರೆ.

ಹೇರ್‌ಕಟ್‌ ಮಾಡಿದ ಅನುಷ್ಕಾ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸಮಯ ಕಳೆಯಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮನೆಯಲ್ಲಿರುವ ಕೊಹ್ಲಿ ಹೊರಗೆ ಹೋಗಲು ಸಾಧ್ಯವಾಗದ ಕಾರಣ ಅನುಷ್ಕಾ ಶರ್ಮಾ ಅವರೇ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದಾರೆ. ಅದರ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿಹಂಚಿಕೊಂಡಿದ್ದಾರೆ.

ಈ ವಿಡಿಯೊಗಳನ್ನುಕೆಲವು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಇಂತಹ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಮೋಜು ಮಸ್ತಿಗಳು ಬೇಕೇ? ಸಿನಿಮಾ, ಕ್ರೀಡೆ, ಜಾಹೀರಾತುಗಳಲ್ಲಿ ಕೋಟಿಗಟ್ಟಲೆ ದುಡಿಯುತ್ತೀರಿ. ಜನರು ಕಷ್ಟದಲ್ಲಿ ಸಾಯುತ್ತಿರುವಾಗ ನೀವು ಸಂಭ್ರಮಿಸುತ್ತಿದ್ದೀರಾ? ಎಂದು ಕಿಡಿ ಕಾರುತ್ತಿದ್ದಾರೆ.

ಅನುಷ್ಕಾ ಸೃಷ್ಟಿಸಿದ ಹೊಸ ಹೇರ್ ಸ್ಟೈಲ್‌ ಅನ್ನು ಕೊಹ್ಲಿ ಮೆಚ್ಚಿಕೊಂಡಿದ್ದಾರೆ. ‘ಗೆಳೆಯರೇ ಸ್ವಲ್ಪ ನೋಡಿ. ಇದು ತುಂಬಾ ಚೆನ್ನಾಗಿದೆ, ನನ್ನ ಹೆಂಡತಿ ಮಾಡಿದ ಸುಂದರವಾದ ಹೇರ್ ಕಟ್’ ಎಂದು ಕೊಹ್ಲಿ ಹೇಳಿದ್ದಾರೆ. ಇದು ವೈರಲ್ ಆಗಿದೆ.

ಪಾತ್ರೆ ತೊಳೆದ ಕತ್ರಿನಾ ಕೈಫ್:

‘ಮನೆ ಕೆಲಸವನ್ನು ಮರೆತಿರುವವರಿಗೆ ನಾನು ಪಾತ್ರೆ ತೊಳೆಯುವುದನ್ನು ಹೇಳಿಕೊಡುತ್ತೇನೆ’ ಎಂದು ತಾವು ಪಾತ್ರೆ ತೊಳೆಯುತ್ತಿರುವ ವಿಡಿಯೊವನ್ನು ಕತ್ರಿನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಕೆಲವರಿಗೆ ಪಾತ್ರೆ ತೊಳೆಯುವುದು ಗೊತ್ತಿಲ್ಲದೇ ಇರಬಹುದು, ಅಥವಾ ಮರೆತು ಹೋಗಿರಬಹುದು. ಈಗ ನಾನು ಪಾತ್ರೆ ತೆಳೆಯುವ ಬಗ್ಗೆ ಹೇಳಿಕೊಡುತ್ತೇನೆ ನೋಡಿ’ ಎಂದಿದ್ದಾರೆ. ‘ಇದೇ ಕೆಲಸವನ್ನು ಪ್ರತಿದಿನ ಮಾಡಿ’ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT