ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲೂ ರಾತ್ರಿ ಆಲಿಯಾ ಭಟ್‌ ದುಡಿಮೆ

Last Updated 20 ನವೆಂಬರ್ 2018, 19:46 IST
ಅಕ್ಷರ ಗಾತ್ರ

‘ರಾಜಿ’ ಚಲನಚಿತ್ರ ಯಶಸ್ವಿಯಾದ ಬಳಿಕ, ಆಲಿಯಾ ಭಟ್‌ ಸುದ್ದಿಯಾಗಿದ್ದು ರಣಬೀರ್‌ ಕಪೂರ್‌ ಜೊತೆಗಿನ ಚಿತ್ರಗಳಿಂದ. ಫ್ಯಾಷನ್‌ ಶೋಗಳಿಂದ. ಇನ್ನೇನು ಬಹುತೇಕ ಬಿಡುವಾಗಿದೆ ಈ ಹುಡುಗಿ ಎಂದುಕೊಳ್ಳುವಾಗಲೇ ’ಆಲಿಯಾ ನಾನೀಗ ಹಗಲು ರಾತ್ರಿ ದುಡಿಯುತ್ತಿದ್ದೇನೆ. ಇನ್ನಷ್ಟು ದಿನಗಳವರೆಗೆ ಈ ಎರಡೂ ಶಿಫ್ಟ್‌ಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ’ ಎಂದು ಹೇಳಿದ್ದಾರೆ.

ಆಲಿಯಾ ಇದೀಗ ಅಭಿಶೇಕ್‌ ವರ್ಮನ್‌ ನಿರ್ದೇಶನದ ಕಳಂಕ್‌ ಚಿತ್ರದಲ್ಲಿಯೂ, ಅಯಾನ್‌ ಮುಖರ್ಜಿಯ ಬ್ರಹ್ಮಾಸ್ತ್ರ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ಕಳಂಕ್‌ಗಾಗಿ ಹಗಲಿನ ಸಮಯ ಮೀಸಲಾಗಿಟ್ಟರೆ, ರಾತ್ರಿ ಸಮಯದ ಚಿತ್ರೀಕರಣಕ್ಕಾಗಿ ಬ್ರಹ್ಮಾಸ್ತ್ರ ಚಿತ್ರೀಕರಣದ ತಂಡಕ್ಕೆ ಸಮಯ ನೀಡಿದ್ದಾರೆ. ಹೀಗಾಗಿ ಹಗಲೂ ರಾತ್ರಿಯೂ ದುಡಿಯುವ ಅನಿವಾರ್ಯ ಅವರಿಗೆ ಎದುರಾಗಿದೆ.

ಈ ನಡುವೆ ರಣಬೀರ್‌ ಜೊತೆಗೆ ಮುನಿಸಿದೆಯೇ? ಅವರಿಬ್ಬರ ಸಂಬಂಧದಲ್ಲಿಯೂ ಬಿರುಕು ಮೂಡುತ್ತಿದೆಯೇ? ಎಲ್ಲವೂ ಸರಿಯಿಲ್ಲ ಎಂಬಂಥ ಮಾತುಗಳು ಬಿ ಟೌನ್‌ನಲ್ಲಿ ಹಾರಾಡುತ್ತಿವೆ. ಕಣ್ತುಂಬಿಕೊಂಡು ಕುಳಿತಿರುವ ಆಲಿಯಾ ಪಕ್ಕ, ತನಗೇನೂ ಸಂಬಂಧವೇ ಇಲ್ಲವೆಂಬಂತೆ ಮೊಬೈಲ್‌ ಹಿಡಿದುಕೊಂಡಿರುವ ರಣಬೀರ್‌ ಚಿತ್ರ ವೈರಲ್‌ ಆಗಿದೆ. ಇವರ ಜಗಳಗಳಿಗೆ ಇಂಥವೇ ಒಂದಷ್ಟು ಫೋಟೊಗಳು ಸಾಕ್ಷಿಯಾದಂತೆ ಹರಿದಾಡುತ್ತಿವೆ. ಯಾವುದಕ್ಕೂ ಏನೂ ಪ್ರತಿಕ್ರಿಯಿಸದ ಆಲಿಯಾ, ಸದ್ಯ ಕೆಲಸದಲ್ಲಿ ಮಾತ್ರ ತಲ್ಲೀನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT