ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಆಲಿಯಾ ಭಟ್‌ಗೆ ಕೋವಿಡ್ ಪಾಸಿಟಿವ್

Last Updated 2 ಏಪ್ರಿಲ್ 2021, 1:12 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೆ ತಾವು ಪ್ರತ್ಯೇಕವಾಸದಲ್ಲಿರುವುದಾಗಿ ನಟಿ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಆಲಿಯಾ, 'ನನಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೂಡಲೇ ನಾನು ಪ್ರತ್ಯೇಕವಾಸಕ್ಕೆ ಒಳಗಾಗಿದ್ದು, ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ನನ್ನ ವೈದ್ಯರ ಸಲಹೆಯಂತೆ ಎಲ್ಲ ಸುರಕ್ಷಾ ಮಾನದಂಡಗಳನ್ನು ಅನುಸರಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಕೃತಜ್ಞನಾಗಿದ್ದೇನೆ. ದಯವಿಟ್ಟು ಸುರಕ್ಷಿತವಾಗಿರಿ, ಕಾಳಜಿ ವಹಿಸಿ' ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಆಲಿಯಾ ಭಟ್ ಹಾಕಿರುವ ಪೋಸ್ಟ್
ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಆಲಿಯಾ ಭಟ್ ಹಾಕಿರುವ ಪೋಸ್ಟ್

ಇತ್ತೀಚೆಗಷ್ಟೇ ರಣಬೀರ್ ಕಪೂರ್ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಕೊರೆನಾ ವೈರಸ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದರು.

ಇದನ್ನೂ ಓದಿ:

'ಬಿಗ್ ಬಿ' ಖ್ಯಾತಿಯ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಪರೇಶ್ ರಾವಲ್, ಕಾರ್ತಿಕ್ ಆರ್ಯನ್, ರಣಬೀರ್ ಕಪೂರ್, ರೋಹಿತ್ ಸರಫ್ ಸೇರಿದಂತೆ ಬಾಲಿವುಡ್‌ನ ಅನೇಕ ನಟ-ನಟಿಯರು ಕೋವಿಂಡ್ ಸೋಂಕಿಗೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT