ಸೋಮವಾರ, ಫೆಬ್ರವರಿ 24, 2020
19 °C

‘ಕೆಜಿಎಫ್‌ 2’ನಲ್ಲಿ ರವೀನಾ ಟಂಡನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್‌–2’ ಚಿತ್ರದ ತಾರಾಬಳಗಕ್ಕೆ ರವೀನಾ ಟಂಡನ್ ಅವರ ಪ್ರವೇಶ ಆಗಿದೆ. ಈ ವಿಚಾರವನ್ನು ಪ್ರಶಾಂತ್ ಅವರೇ ಹಂಚಿಕೊಂಡಿದ್ದಾರೆ.

ತಾವು ರವೀನಾ ಜೊತೆ ಇರುವ ಚಿತ್ರವನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಪ್ರಶಾಂತ್ ಅವರು, ‘ಡೆತ್ ವಾರಂಟ್ ಹೊರಡಿಸುವ ಮಹಿಳೆ ಬಂದಿದ್ದಾರೆ! ರವೀನಾ ಟಂಡನ್ ಅವರಿಗೆ ಬೆಚ್ಚಗಿನ ಸ್ವಾಗತ’ ಎಂದು ಬರೆದಿದ್ದಾರೆ.

ಕೆಜಿಎಫ್‌–2 ಚಿತ್ರದಲ್ಲಿ ರವೀನಾ ಅವರು ರಮಿಕಾ ಸೆನ್‌ ಎನ್ನುವ ಪೊಲೀಸ್ ಅಧಿಕಾರಿಯ ‍ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗಿದೆ. ನಟ ಸಂಜಯ್ ದತ್ ಅವರು ಇದರಲ್ಲಿ ಅಧೀರನ ಪಾತ್ರ ನಿಭಾಯಿಸಲಿದ್ದಾರೆ.

ಕನ್ನಡದಲ್ಲಿ ರವೀನಾ ಅವರು ಈ ಹಿಂದೆ ಉಪೇಂದ್ರ ನಿರ್ದೇಶನದ ‘ಉಪೇಂದ್ರ’ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಕೆಜಿಎಫ್‌–2 ಚಿತ್ರದ ಮೂಲಕ ‘ಮೊಹ್ರಾ’ದ ಮಸ್ತ್ ಮಸ್ತ್ ಹುಡುಗಿ ಮತ್ತೆ ಕನ್ನಡ ಹಿರಿತೆರೆಗೆ ಬಂದಂತೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು