ಭಾನುವಾರ, ಆಗಸ್ಟ್ 18, 2019
24 °C

ಅರ್ಹಾನ್ ಮೇಲೆ ಬಾಲಿವುಡ್‌ ಕಣ್ಣು

Published:
Updated:
Prajavani

ಶಾರುಕ್‌ ಖಾನ್‌ ಪುತ್ರಿ ಸುಹಾನಾ ಖಾನ್‌, ಅಜಯ್‌ ದೇವಗನ್ ಮತ್ತು ಕಾಜೊಲ್‌ ಪುತ್ರಿ ನ್ಯಾಸಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಈಗ ನಟಿ ಮಲೈಕಾ ಆರೋರಾ–ಅರ್ಬಾಜ್‌ ಖಾನ್ ಮಗ ಅರ್ಹಾನ್‌ ಖಾನ್‌ ಸಹ ಸದ್ಯದಲ್ಲೇ ಬಾಲಿವುಡ್‌ ಪ್ರವೇಶಿಸಲಿದ್ದಾರೆ. ಈ ಬಗ್ಗೆ ಸ್ವತಃ ಮಲೈಕಾ ಸುಳಿವು ನೀಡಿದ್ದಾರೆ. 16 ವರ್ಷದ ಅರ್ಹಾನ್‌ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿ! ಅವನ ಮೇಲೆ ಬಾಲಿವುಡ್‌ನ ಕಣ್ಣು ಬಿದ್ದಿದೆ. ಮಲೈಕಾ ಕೂಡ ‘ಅವನಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಆಕರ್ಷಣೆಯಿದೆ. ಸಿನಿಮಾ, ನಟನೆ ವಾತಾವರಣದಲ್ಲಿಯೇ ಬೆಳೆದಿದ್ದಾನೆ. ಅವನಿಗೆ ಸಿನಿಮಾಗಳು ಅಂದ್ರೆ ಇಷ್ಟ. ಅವನು ಸಿನಿಮಾಗಳನ್ನು ಫಾಲೋ ಮಾಡುತ್ತಾನೆ. ಸಿನಿಮಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾನೆ’ ಎಂದು ಹೇಳಿದ್ದಾರೆ. 

‘ಆದರೆ ಅವನಿಗೆ ನಟನೆ, ನಿರ್ದೇಶನ ಅಥವಾ ಬೇರೆ ಯಾವ ವಿಭಾಗದಲ್ಲಿ ಆಸಕ್ತಿ ಇದೆ ಎನ್ನುವುದು ನನಗೆ ತಿಳಿದಿಲ್ಲ. ಯಾವಾಗ ಸಿನಿಮಾ ಲೋಕವನ್ನು ಪ್ರವೇಶಿಸಬಹುದು ಎಂಬ ಬಗ್ಗೆ ಖಚಿತವಾಗಿ ಹೇಳಲಾರೆ' ಎನ್ನುತ್ತಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಅರ್ಹಾನ್‌ ತಂದೆ ಅರ್ಬಾಜ್‌ ಖಾನ್‌ ‘ನನ್ನ ಮಗ ಬಾಲಿವುಡ್‌ ಪ್ರವೇಶಕ್ಕೆ ನಿರ್ಧರಿಸಿದರೆ ಅದಕ್ಕಾಗಿ ನಾನು ಸಂಪೂರ್ಣ ಸಿದ್ಧತೆ ಮಾಡಲು ತಯಾರಿ. ಆದರೆ ಅದರ ಬಗ್ಗೆ ಅವನು ಯಾವತ್ತೂ ನಮ್ಮ ಬಳಿ ಹೇಳಿಕೊಂಡಿಲ್ಲ. ಬಾಲಿವುಡ್‌ ಪಯಣ ಸುಲಭವಲ್ಲ. ಸಲ್ಮಾನ್‌ ಖಾನ್‌ ಜೊತೆ ತನ್ನನ್ನು ಆತ ಹೋಲಿಸಿಕೊಳ್ಳಬಾರದು. ತನ್ನ ಗುರಿ ಬಗ್ಗೆ  ಸ್ಪಷ್ಟವಾಗಿ ಅವನು ಆಲೋಚಿಸಬೇಕು. ಅದಕ್ಕೆ ತಾಳ್ಮೆ ಮುಖ್ಯ’ ಎಂದು ಹೇಳಿದ್ದರು. 

ಅರ್ಹಾನ್‌ ಖಾನ್‌, ದೊಡ್ಡಪ್ಪ ಸಲ್ಮಾನ್‌ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಆಗಾಗ ಸಲ್ಮಾನ್‌, ಅರ್ಹಾನ್‌ ಜೊತೆಗಿನ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಪ್ರತಿವರ್ಷ ಬಾಲಿವುಡ್‌ಗೆ ಸಲ್ಮಾನ್‌ ಹೊಸ ಹೊಸ ಮುಖಗಳನ್ನು ಪರಿಚಯ ಮಾಡುತ್ತಾರೆ. ಒಂದು ಉತ್ತಮ ಸಿನಿಮಾ ಮೂಲಕ ಅರ್ಹಾನ್‌ನನ್ನೂ ಬಾಲಿವುಡ್‌ಗೆ ಸಲ್ಮಾನ್‌ ಪರಿಚಯ ಮಾಡಿಕೊಡಬಹುದು ಎನ್ನುವುದು ಬಾಲಿವುಡ್‌ ಲೆಕ್ಕಾಚಾರ.

Post Comments (+)