ಬಾಬಿ ಡಿಯೋಲ್ ಹಾಗೂ ರಾಜ್ ಬಿ.ಶೆಟ್ಟಿ ನಟನೆಯ ‘ಬಂದರ್’ ಸಿನಿಮಾ ವಿಶ್ವದಾದ್ಯಂತ ಜೂನ್ 5ಕ್ಕೆ ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆಯು ತಿಳಿಸಿದೆ.

ಅನುರಾಗ್ ಕಶ್ಯಪ್ ನಿರ್ದೇಶನದ ಈ ಸಿನಿಮಾದ ಕಥೆಯನ್ನು ಸುದೀಪ್ ಶರ್ಮಾ ಹಾಗೂ ಅಭಿಷೇಕ್ ಬ್ಯಾನರ್ಜಿ ಬರೆದಿದ್ದಾರೆ. 2025ರ ಸೆಪ್ಟೆಂಬರ್ನಲ್ಲಿ ಟೊರಾಂಟೊ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡಿದ್ದ ಈ ಸಿನಿಮಾವು ನೈಜ ಘಟನೆ ಆಧರಿಸಿದೆ. ಸಿನಿಮಾ ನಟನೊಬ್ಬನ ವಿರುದ್ಧ ಅತ್ಯಾಚಾರದ ಆರೋಪ ಹಾಗೂ ಕಾನೂನಿನ ವ್ಯವಸ್ಥೆಯ ಸುತ್ತ ಚಿತ್ರದ ಕಥೆ ಇದೆ. ಈಗಾಗಲೇ ಮಲಯಾಳ ಸಿನಿಮಾಗಳಲ್ಲಿ ನಟಿಸಿರುವ ರಾಜ್ ಬಿ.ಶೆಟ್ಟಿ, ಈ ಸಿನಿಮಾ ಮೂಲಕ ಬಾಲಿವುಡ್ಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ.

ನಿಖಿಲ್ ದ್ವಿವೇದಿ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಜೀ ಸ್ಟುಡಿಯೋಸ್ ಸಹಯೋಗ ನೀಡಿದೆ. ಸಾನ್ಯ ಮಲ್ಹೋತ್ರ, ಜಿತೇಂದ್ರ ಜೋಶಿ, ಸಪ್ನ ಪಬ್ಬಿ, ಇಂದ್ರಜಿತ್ ಸುಕುಮಾರನ್, ರಿದ್ದಿ ಸೇನ್, ಸಬಾ ಆಜಾದ್, ನಾಗೇಶ್ ಭೋಸ್ಲೆ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಜೊತೆಗೆ ಶಿವ್ ರವೈಲ್ ನಿರ್ದೇಶನದ ‘ಆಲ್ಫಾ’ ಹಾಗೂ ವಿಜಯ್ ನಟನೆಯ ‘ಜನನಾಯಗನ್’ ನಲ್ಲೂ ಬಾಬಿ ಡಿಯೋಲ್ ನಟಿಸಿದ್ದಾರೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-1241874176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.