ಗುರುವಾರ , ಮೇ 13, 2021
22 °C

ಸಂಗೀತ ನಿರ್ದೇಶಕ ಶ್ರವಣ್‌ ರಾಥೋಡ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಸಂಗೀತ ನಿರ್ದೇಶಕ ಶ್ರವಣ್‌ ರಾಥೋಡ್‌(66) ಅವರು ಕೋವಿಡ್‌ನಿಂದ ಗುರುವಾರ ರಾತ್ರಿ ನಿಧನರಾದರು.

ಕೋವಿಡ್‌ಗೆ ತುತ್ತಾಗಿದ್ದ ಅವರನ್ನು ಏ. 20ರಂದು ಮುಂಬೈನ ಎಸ್‌.ಎಲ್‌. ರಹೇಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಅದು ನದೀಮ್‌ ಶ್ರವಣ್‌ ಜೋಡಿ: ಸಂಗೀತ ನಿರ್ದೇಶಕ ನದೀಮ್‌ ಸೈಫಿ ಮತ್ತು ಶ್ರವಣ್‌ ಜೋಡಿ ಬಾಲಿವುಡ್‌ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿ. ಆ ಜೋಡಿಯ ಕೊಂಡಿಯೊಂದು ಕಳಚಿದೆ. 1975ರಿಂದಲೇ ಶ್ರವಣ್‌ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. 1990ರ ದಶಕದಲ್ಲಿ ನದೀಮ್‌– ಶ್ರವಣ್‌ ಯಶಸ್ವೀ ಸಂಗೀತ ಜೋಡಿ ಎಂದೇ ಹೆಸರಾಗಿತ್ತು. ಆಶಿಕಿ, ಸಾಜನ್, ಹಮ್ ಹೈ ರಾಹಿ ಪ್ಯಾರ್ ಕಿ, ಪರ್‌ದೇಸ್‌, ರಾಜಾ ಹಿಂದೂಸ್ತಾನಿ ಅವರು ಸಂಗೀತದ ಜೊತೆ ಯಶಸ್ವಿಯಾದ ಪ್ರಮುಖ ಚಿತ್ರಗಳು. ಶ್ರವಣ್‌ ನಿಧನಕ್ಕೆ ಬಾಲಿವುಡ್‌ ಹಾಗೂ ಚಿತ್ರ ಸಂಗೀತಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು