ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ಗೆ ‘ರಿಷಿ ಕಪೂರ್‌’ ರಿಟರ್ನ್ಸ್‌

Last Updated 28 ಜುಲೈ 2019, 19:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ಒಂದು ವರ್ಷದಿಂದ ನಟನೆಯಿಂದ ದೂರ ಉಳಿದಿದ್ದ ಬಾಲಿವುಡ್‌ ನಟ ರಿಷಿ ಕಪೂರ್‌ ಮತ್ತೆ ಶೀಘ್ರದಲ್ಲಿಯೇ ಮುಖಕ್ಕೆ ಬಣ್ಣ ಹಚ್ಚಲಿದ್ದಾರೆ. ಕ್ಯಾನ್ಸರ್‌ ಚಿಕಿತ್ಸೆ ಮುಗಿದಿದ್ದು ಚೇತರಿಸಿಕೊಂಡಿರುವ ಅವರು ಮುಂಬೈಗೆ ಹಾರಲು ಗಂಟು, ಮೂಟೆ ಕಟ್ಟಿ ಸಜ್ಜಾಗಿದ್ದಾರೆ. ಲವಲವಿಕೆಯಿಂದ ಓಡಾಡಿಕೊಂಡಿರುವ ಅವರು ಮುಂಬೈಗೆ ಹಿಂದಿರುಗುವ ಖುಷಿಯಲ್ಲಿ ಗೆಲುವಾಗಿದ್ದಾರೆ.

‘ನನ್ನೊಳಗಿನ ನಟ ಕ್ಯಾಮೆರಾ ಎದುರಿಸಲು ಹಾತೊರೆಯುತ್ತಿದ್ದಾನೆ. ಕ್ಯಾಮೆರಾ, ಲೈಟ್ಸ್‌ ಎದುರಿಸದೆ ಬಹಳ ವರ್ಷಗಳೇ ಆದವು ಎಂದು ಎನಿಸುತ್ತಿದೆ. ಅಭಿನಯ ಬಿಟ್ಟು ಬದುಕಲು ಸಾಧ್ಯವಿಲ್ಲ. ಇನ್ನೂ ಕಾಯುವುದು ಸಾಧ್ಯವಿಲ್ಲ’ ಎಂದು ರಿಷಿ ತಮ್ಮ ತಳಮಳ ತೋಡಿಕೊಂಡಿದ್ದಾರೆ.

‘ಬಂಗಾಳಿ ರಿಮೇಕ್‌ ಮತ್ತು ಮತ್ತೊಂದು ಚಿತ್ರ ಕೈಯಲ್ಲಿವೆ. ಆರೋಗ್ಯ ಕೈ ಕೊಡದಿದ್ದರೆ ಮೊದಲಿನಷ್ಟೇ ಪ್ರೀತಿ ಮತ್ತು ಜೋಶ್‌ನಿಂದ ಅಭಿನಯಿಸುತ್ತೇನೆ. ಆ ಬಗ್ಗೆ ಯಾವುದೇ ಸಂಶಯ ಬೇಡ’ ಎಂದು ರಿಷಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘45 ವರ್ಷಗಳ ವೃತ್ತಿ ಬದುಕಿನಲ್ಲಿ ಕ್ಯಾಮೆರಾದಿಂದ ಇಷ್ಟು ದಿನ ದೂರು ಉಳಿದ ನಿದರ್ಶನಗಳಿಲ್ಲ. ಇದೇ ಮೊದಲ ಬಾರಿ ಇಷ್ಟೊಂದು ದಿನ ಬಣ್ಣದ ಬದುಕಿನಿಂದ ದೂರ ಉಳಿದಿದ್ದೇನೆ. ಹೀಗಾಗಿ ನಟನೆಯನ್ನು ಮರೆತಿರಬಹುದಾ ಎಂಬ ಸಣ್ಣದೊಂದು ಅಳಕು ನನ್ನನ್ನು ಕಾಡುತ್ತಿದೆ’ ಎಂದು 66 ವರ್ಷದ ರಿಷಿ ಖುಷಿಯಿಂದ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT