ಸೋಮವಾರ, ಅಕ್ಟೋಬರ್ 3, 2022
24 °C

ಹೃತಿಕ್ ರೋಷನ್‌ಗೂ ಬಾಯ್ಕಾಟ್‌: ‘ವಿಕ್ರಂ–ವೇದ‘ ಸಿನಿಮಾಗೆ ಸಂಕಷ್ಟ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ‘ಲಾಲ್‌ ಸಿಂಗ್‌ ಚಡ್ಡಾ‘ ಸಿನಿಮಾ ನೋಡುವಂತೆ ನಟ ಅಮೀರ್‌ ಖಾನ್‌ ಬೆಂಬಲಿಸಿ ಹೇಳಿಕೆ ನೀಡಿದ್ದ ನಟ ಹೃತಿಕ್ ರೋಷನ್‌ಗೆ ಬಾಯ್ಕಾಟ್‌ ಸಂಕಷ್ಟ ಎದುರಾಗಿದೆ. 

ಅಮೀರ್‌ ಬೆಂಬಲಿಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹೃತಿಕ್‌ ಕೂಡ ಬಹಿಷ್ಕಾರದ ಬಿಸಿ ಅನುಭವಿಸುತ್ತಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ ಹೃತಿಕ್ ಅಭಿನಯದ ‘ವಿಕ್ರಂ ವೇದ‘ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಪ್ರಾರಂಭಿಸಲಾಗಿದೆ. ಬಾಯ್ಕಾಟ್‌ಹೃತಿಕ್‌ರೋಷನ್‌ (#boycottHrithikRoshan) ಎಂದು ಹ್ಯಾಶ್‌ಟ್ಯಾಗ್‌ ಹಾಕಿ ಸಾವಿರಾರು ಜನರು ಇದರಲ್ಲಿ ಭಾಗವಹಿಸಿದ್ದಾರೆ. 

ಈ ಹಿಂದೆ ಹೃತಿಕ್‌ ‘ಲಾಲ್ ಸಿಂಗ್ ಚಡ್ಡಾ‘ ಚಿತ್ರ ನೋಡಿ, ‘ಈ ಸಿನಿಮಾ ಹೃದಯ ಸ್ಪರ್ಶಿಯ ಅನುಭವ ನೀಡಿದೆ. ಉತ್ತಮ ಈ ಸಿನಿಮಾವನ್ನು ನೋಡದೆ ಇರಬೇಡಿ ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ರಾಹುಲ್‌ ಜೈನ್‌ ವಿರುದ್ಧ ಅತ್ಯಾಚಾರ ದೂರು: ಆರೋಪ ನಿರಾಕರಿಸಿದ ಗಾಯಕ 

ಈ ಹಿನ್ನೆಲೆಯಲ್ಲಿ ಹೃತಿಕ್‌ ಅವರ ಸಿನಿಮಾವನ್ನು ನೋಡಬೇಡಿ ಎಂದು ಕೆಲವರು ಅಭಿಯಾನ ಶುರು ಮಾಡಿದ್ದಾರೆ. ತಮಿಳಿನ  ವಿಕ್ರಂ ವೇದ ಚಿತ್ರದ ರೀಮೆಕ್ ಆಗಿರುವ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಕೆಲವೇ ದಿನಗಳಲ್ಲಿ ವಿಕ್ರಂ ವೇದ ಚಿತ್ರ ಬಿಡುಗಡೆಯಾಗಲಿದೆ. ಈ ಅಭಿಯಾನದಿಂದ ‘ವಿಕ್ರಂ ವೇದ‘ ಸಿನಿಮಾಗೂ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಬಿಪಾಶಾ ಬಸು: ‘ಬೇಬಿ ಬಂಪ್‘ ಫೋಟೊ ಹಂಚಿಕೊಂಡ ನಟಿ

ಹೃತಿಕ್‌ ಅವರನ್ನು ಬೆಂಬಲಿಸದಿರುವಂತೆ ಮಾಡಿರುವ ಕೆಲವು ಟ್ವೀಟ್‌ಗಳು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು