ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಬ್ರಹ್ಮರಾಕ್ಷಸ’ನ ಐಟಂ ಸಾಂಗ್

Published : 31 ಆಗಸ್ಟ್ 2024, 5:38 IST
Last Updated : 31 ಆಗಸ್ಟ್ 2024, 5:38 IST
ಫಾಲೋ ಮಾಡಿ
Comments

1980-90ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಹೊಂದಿರುವ ‘ಬ್ರಹ್ಮರಾಕ್ಷಸ’ ಚಿತ್ರದ ಐಟಂ ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ನಾಗೇಂದ್ರ ಅರಸ್ ಅವರು ಹಾಡು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿದ್ದ ಶಂಕರ್.ವಿ. ಮೊದಲ ಬಾರಿಗೆ ಆ್ಯಕ್ಷನ್‌ ಕಟ್ ಹೇಳಿರುವ ಚಿತ್ರ ಇದಾಗಿದ್ದು, ಜ್ಯೋತಿ ಆರ್ಟ್ಸ್ ಮೂಲಕ ಕೆ.ಎಂ.ಪಿ. ಶ್ರೀನಿವಾಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

‘ಉಡುಪಿ, ಕುಂದಾಪುರ ಹಾಗೂ ಸೆಟ್‌ಗಳಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ. ಮಳೆ ಹಾಗೂ ರಾತ್ರಿ ವೇಳೆಯಲ್ಲೇ ಹೆಚ್ಚು ಚಿತ್ರೀಕರಣಗೊಂಡಿದೆ. ತಪ್ಪು ಮಾಡದೆ ಇಬ್ಬರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸುತ್ತಾರೆ. ಅದೇ ಸೇಡಿನಿಂದ ಹೇಗೆ ದ್ವೇಷ ತೀರಿಸಿಕೊಳ್ಳಲು ಹೊರಡುತ್ತಾರೆ ಎನ್ನುವುದೇ ಈ ಚಿತ್ರ. ಸೆನ್ಸಾರ್ ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ನಿರ್ದೇಶಕರು ತಿಳಿಸಿದರು. 

ನಾಯಕ ಅಂಕುಶ್ ಏಕಲವ್ಯಗೆ ಪಲ್ಲವಿ ಗೌಡ ಜೋಡಿಯಾಗಿದ್ದಾರೆ. ವೈಜನಾಥ ಬಿರಾದಾರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ತಯಾರಾಗಿದೆ. ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಅನಿರುದ್ದ ಅವರ ಛಾಯಾಚಿತ್ರಗ್ರಹಣವಿದೆ. ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT