ಭಾರತೀಯ ಚಿತ್ರರಂಗದ ಮೇರು ಗಾಯಕಿ ಆಶಾ ಭೋಸ್ಲೆ ಅವರು ಏಪ್ರಿಲ್ 12ರಂದು ನಿಧನರಾಗಿದ್ದಾರೆ. ಇವರ ಸಾವಿಗೆ ಭಾರತದಲ್ಲಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಸಂತಾಪ ವ್ಯಕ್ತವಾಗಿದೆ.

WWE ಸೂಪರ್ಸ್ಟಾರ್ ಹಾಗೂ ನಟ ಜಾನ್ ಸೀನಾ, ಕ್ರಿಕೆಟಿಗ ಬ್ರೆಟ್ ಲೀ ಸೇರಿದಂತೆ ಹಲವರು ಸಂತಪಾ ಸೂಚಿಸಿದ್ದಾರೆ.

ಜಾನ್ ಸೀನಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಆಶಾ ಭೋಸ್ಲೆ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗೆ ಬಳಕೆದಾರರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದು, ‘ಜಾನ್ ಅವರನ್ನು ಭಾರತವು ಪ್ರೀತಿಸುತ್ತದೆ. ಒಬ್ಬ ದಂತಕಥೆ ಮೊತ್ತೊಬ್ಬ ದಂತಕಥೆಯನ್ನು ನೆನೆಯುವುದು ತುಂಬಾ ಸಂತೋಷವಾಗುತ್ತದೆ’ ಎಂದು ಬರೆದಿದ್ದಾರೆ.

ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರು ಆಶಾ ಭೋಸ್ಲೆ ಸಾವಿಗೆ ವಿಶಾದ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ‘ಯು ಆರ್ ದಿ ಒನ್ ಫಾರ್ ಮಿ’ ಎಂಬ ಯುಗಳ ಗೀತೆಯಲ್ಲಿ ಭೋಸ್ಲೆ ಅವರೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಬ್ರೆಟ್ ಲೀ ಅವರು ಆಶಾ ಭೋಸ್ಲೆ ಅವರೊಂದಿಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘2006 ರಲ್ಲಿ ಆಶಾ ಭೋಸ್ಲೆ ಅವರೊಂದಿಗೆ ಯು ಆರ್ ದಿ ಒನ್ ಫಾರ್ ಮಿ ಎಂಬ ಹಾಡನ್ನು ಬರೆಯುವ ಮತ್ತು ರೆಕಾರ್ಡ್ ಮಾಡುವ ಅವಕಾಶ ನನಗೆ ದೊರಕಿತ್ತು. ಈ ಅವಕಾಶಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಅವರು ತುಂಬಾ ಮೃದು ಹಾಗೂ ವಿನಮ್ರ ಸ್ವಭಾವದವರಾಗಿದ್ದರು. ಇಂತಹ ವಿಶೇಷ ವ್ಯಕ್ತಿಯೊಂದಿಗೆ ಸಮಯ ಕಳೆದಿದ್ದಕ್ಕಾಗಿ ನಾನು ಅದೃಷ್ಟಶಾಲಿ’ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಕೂಡ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಶಾ ಭೋಸ್ಲೆ ಅವರ ನೆನಪನ್ನು ಹಂಚಿಕೊಂಡಿದ್ದಾರೆ. ‘ಆಶಾ ಭೋಸ್ಲೆ ಅವರು ಎಲ್ಲಾ ಕಾಲಕ್ಕೂ ಅಜರಾಮರವಾಗಿ ಉಳಿಯುತ್ತಾರೆ. ಅವರ ಧ್ವನಿ ನನ್ನ ತಲೆಮಾರು, ಹಿಂದಿನ ತಲೆಮಾರು ಹಾಗೂ ಮುಂದಿನ ತಲೆಮಾರಿಗೂ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇವರ ಕಲೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.