ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ಟ್ರೇಲಿಯಾದಲ್ಲಿ ಮಗುವನ್ನು ಪಡೆಯಿರಿ’: ವಿರುಷ್ಕಾಗೆ ಬ್ರೆಟ್ ಲೀ ಸ್ವಾಗತ 

Last Updated 18 ಡಿಸೆಂಬರ್ 2020, 14:35 IST
ಅಕ್ಷರ ಗಾತ್ರ

ಮುಂಬೈ: ಆಸ್ಟ್ರೇಲಿಯಾದಲ್ಲಿ ಮಗುವನ್ನು ಪಡೆಯುವಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಆಹ್ವಾನ ನೀಡಿದ್ದಾರೆ. ಆಸ್ಟ್ರೇಲಿಯಾ ಜನ ಅವರನ್ನು ತುಂಬು ಹೃದಯದಿಂದ ಸ್ವೀಕರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಪತ್ನಿ ಅನುಷ್ಕಾ ಶರ್ಮಾಳಿಂದ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಸದ್ಯ, ಅಡಿಲೇಡ್‌ನಲ್ಲಿ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಈ ಪಂದ್ಯ ಡಿಸೆಂಬರ್ 21ಕ್ಕೆ ಮುಗಿಯಲಿದ್ದು, ಬಳಿಕ ವಿರಾಟ್ ಕೊಹ್ಲಿ ಮುಂಬೈಗೆ ತೆರಳಿ ಮಗುವಿನ ನಿರೀಕ್ಷೆ ಮಾಡಲಿದ್ದಾರೆ.

ಮಿಡ್ ಡೇ ಸಂದರ್ಶನದಲ್ಲಿ ಬ್ರೆಟ್ ಲೀ, ಅನುಷ್ಕಾ ಮತ್ತು ಕೊಹ್ಲಿಯನ್ನು ಆಸ್ಟ್ರೇಲಿಯಾದಲ್ಲಿ ಮಗುವನ್ನು ಪಡೆಯುವಂತೆ ಸ್ವಾಗತಿಸಿದ್ದಾರೆ. ‘ಮಿಸ್ಟರ್ ಕೊಹ್ಲಿ ನೀವು ಇಚ್ಛಿಸುವುದಾದರೆ ಆಸ್ಟ್ರೇಲಿಯಾದಲ್ಲಿ ನೀವು ನಿಮ್ಮ ಮಗುವನ್ನು ಪಡೆಯುವುದಕ್ಕೆ ಸ್ವಾಗತ. ನಾವು ನಿಮ್ಮನ್ನು ಸ್ವೀಕರಿಸುತ್ತೇವೆ. ಅದು ಹೆಣ್ಣು ಮಗುವಾಗಲಿ, ಗಂಡು ಮಗುವಾಗಲಿ ಅದು ಅದ್ಬುತ’ ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಮಾತೃತ್ವದಅನುಭವದ ಬಗ್ಗೆ ಹೇಳಿಕೊಂಡಿದ್ದ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಜಾಹೀರಾತಿನಲ್ಲಿ ತಾಯ್ತನದ ಕುರಿತಾದ ನಿಸ್ವಾರ್ಥ ಪ್ರೇಮದ ಬಗ್ಗೆ ವಿವರಿಸಿದ್ದರು.

ಶಾರೂಖ್ ಖಾನ್ ಜೊತೆ ನಟಿಸಿದ್ದ ಜೀರೋ ಬಳಿಕ ಅನುಷ್ಕಾ ಶರ್ಮಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆಗೊಮ್ಮೆ ಈಗೊಮ್ಮೆ ಜಾಹೀರಾತುಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT