ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರೋಚೆ...’ಯ ಹೂರಣತಾರುಣ್ಯದ ಪ್ರೀತಿ

Last Updated 22 ಏಪ್ರಿಲ್ 2019, 14:45 IST
ಅಕ್ಷರ ಗಾತ್ರ

ಟಾಲಿವುಡ್‌ ನಟ ವಿವೇಕ್‌ ಆತ್ರೇಯ ಮತ್ತು ನಿವೇತಾ ಥಾಮಸ್ ಈ ವರ್ಷದ ಹಿಟ್‌ ಚಿತ್ರ ನೀಡಲಿದ್ದಾರಾ? ಈ ಜೋಡಿಯ ಹೊಸ ಚಿತ್ರ ’ಬ್ರೋಚೆವರೆವರುರ‘ದ ಟೀಸರ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ಹಾಗೊಂದು ಸಂದೇಶ ರವಾನಿಸುತ್ತಿದೆ.

ರಾಕಿ, ರಾಂಬೊ ಮತ್ತು ರಾಹುಲ್‌ ಎಂಬ ಪಾತ್ರಗಳಲ್ಲಿ ಶ್ರೀವಿಷ್ಣು, ಪ್ರಿಯದರ್ಶಿ ಹಾಗೂರಾಹುಲ್‌ ರಾಮಕೃಷ್ಣ ನಟಿಸಿದ್ದಾರೆ. ಇವರು ಈ ಚಿತ್ರದ ಆರ್‌3ಗಳು. ಸೋಮಾರಿತನ, ಬೇಜವಾಬ್ದಾರಿ ಮತ್ತು ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಓದಿನಲ್ಲಿಯೂ ಕೊನೆಯ ಸಾಲಿನ ಹುಡುಗರು ಇವರು. ವಿದ್ಯಾರ್ಥಿ ಜೀವನದ ರೊಮ್ಯಾಂಟಿಕ್‌ ಲವ್‌ ಸ್ಟೋರಿಯನ್ನು ಬಹಳ ಸುಂದರವಾಗಿ ಕಟ್ಟಿಕೊಡಲಾಗಿದೆ ಎಂಬುದನ್ನು ಟೀಸರ್‌ ತೋರಿಸಿಕೊಡುತ್ತದೆ.

ರಾಕಿ (ಶ್ರೀವಿಷ್ಣು) ತನ್ನದೇ ಕಾಲೇಜಿನ ಪ್ರಿನ್ಸಿಪಾಲರ ಮಗಳು ಮಿತ್ರಾಳನ್ನು (ನಿವೇತಾ ಥಾಮಸ್‌) ಪ್ರೀತಿಸುತ್ತಾಳೆ. ರಾಜ್ಯ ಮಟ್ಟದ ಭರತನಾಟ್ಯ ಕಲಾವಿದೆಯಾಗಿ ಮಿತ್ರಾಳ‍ಪಾತ್ರದಲ್ಲಿ ನೃತ್ಯ ಪ್ರತಿಭೆಯನ್ನು ತೋರಿಸುವ ಅವಕಾಶ ನಿವೇತಾಗೆ ಸಿಕ್ಕಿದೆ. ಕಷ್ಟಪಡದೆ ಹಣ ಸಂಪಾದಿಸುವ ಬುದ್ಧಿಯ ರಾಕಿಯ ಪಾತ್ರದಲ್ಲಿ ಶ್ರೀವಿಷ್ಣು ಕೂಡಾ ಉತ್ತಮ ಅಭಿನಯ ತೋರಿದ್ದಾರೆ. ಇದೆಲ್ಲವುಗಳಿಗೆ ಬೋನಸ್‌ ಎಂಬಂತೆ ಇಡೀ ಚಿತ್ರಕತೆಯನ್ನು ರೊಮ್ಯಾಂಟಿಕ್‌ ಮತ್ತು ಕಾಮಿಡಿಯಾಗಿ ಕಟ್ಟಿಕೊಟ್ಟಿರುವುದು ಕೂಡಾ ಟೀಸರ್‌ನಿಂದ ತಿಳಿಯುತ್ತದೆ.

ಟೀಸರ್‌ನಲ್ಲಿ ವಿವೇಕ್‌ ಸಾಗರ್‌ ಅವರ ಸಂಗೀತವೂ ಮನೋಜ್ಞವಾಗಿ ಮೂಡಿಬಂದಿದೆ.ನಿವೇತಾ ಪೇತುರಾಜ್‌ ಕೂಡಾ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT