‘ಬಿ.ಟೆಕ್‌ ಸ್ಟೂಡೆಂಟ್ಸ್‌ ಜರ್ನಿ’ಯಲ್ಲಿ...

7

‘ಬಿ.ಟೆಕ್‌ ಸ್ಟೂಡೆಂಟ್ಸ್‌ ಜರ್ನಿ’ಯಲ್ಲಿ...

Published:
Updated:
Deccan Herald

‘ಇಬ್ಬರು ಬಿ.ಟೆಕ್‌ ಸ್ಟೂಡೆಂಟ್ಸ್‌ ಜರ್ನಿ’ ಹೆಸರಿನ ಸಿನಿಮಾ ಮೂಲಕ ತೆಲುಗು ಚಿತ್ರತಂಡವೊಂದು ಕನ್ನಡದಲ್ಲಿ ಸಿನಿಮಾ ಪ್ರಯಾಣ ಆರಂಭಿಸಿದ್ದು ಹಳೆಯ ಸುದ್ದಿ. ಎಷ್ಟು ಹಳೆಯದು ಅಂದರೆ, ಅವರ ಜರ್ನಿ ಆರಂಭವಾಗಿದ್ದು 2017ರಲ್ಲಿ.

ಈ ಚಿತ್ರತಂಡ ಈಗ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದೆ. ಅದಕ್ಕಾಗಿ ಒಂದು ಚಿಕ್ಕ ಕಾರ್ಯಕ್ರಮವನ್ನೂ ಆಯೋಜಿಸಿತ್ತು. ಚಿತ್ರದ ನಿರ್ದೇಶನ ಮಾಡುತ್ತಿರುವವರು ವೇಮುಗಂಟಿ. ಚಿತ್ರದ ನಾಯಕ ಕೃಷ್ಣಂರಾಜು. ನಾಯಕಿ ಕಿರಣ್ ಚಾತ್ವಾನಿ.

ಚಿತ್ರದ ಬಹುತೇಕ ಸದಸ್ಯರು ತೆಲುಗು ಭಾಷಿಕರು. ಈ ಚಿತ್ರವನ್ನು ಅವರು ತೆಲುಗಿನಲ್ಲಿಯೂ ನಿರ್ಮಿಸುತ್ತಿದ್ದಾರೆ.

ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಬರುವುದಾಗಿ ನಟ ಅಂಬರೀಷ್ ಅವರು ಹೇಳಿದ್ದರಂತೆ. ಆದರೆ ವಿಧಿಯಾಟ ಬೇರೆಯದೇ ಇತ್ತು. ಇದನ್ನು ಚಿತ್ರತಂಡ ಕಾರ್ಯಕ್ರಮದ ಆರಂಭದಲ್ಲಿ ತಿಳಿಸಿತು.

‘ಇದು ನಾನು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡದ ಎಲ್ಲರೂ ಸಹಕಾರ ನೀಡಿದ್ದಾರೆ. ಈಗ ಜನರ ಸಹಕಾರ ನಮಗೆ ಬೇಕು’ ಎಂದವರು ವೇಮುಗಂಟಿ.

ಚಿತ್ರದ ದ್ವಿತೀಯಾರ್ಧವು ಸಾಯಿಕುಮಾರ್ ಅವರ ಪಾತ್ರವನ್ನು ಬಹುವಾಗಿ ನೆಚ್ಚಿಕೊಂಡಿದೆಯಂತೆ. ಬೆಂಗಳೂರು, ನಂದಿಬೆಟ್ಟ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳನ್ನು ಮಲೇಷ್ಯಾದಲ್ಲಿ ಚಿತ್ರೀಕರಿಸಲಾಗಿದೆ.

ವಿಜಯ್ ಚೆಂಡೂರ್ ಅವರು ಇದರಲ್ಲಿ ಮುಖ್ಯ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಈ ಚಿತ್ರದ ಕಥೆ ಇಬ್ಬರು ಬಿ.ಟೆಕ್‌ ವಿದ್ಯಾರ್ಥಿಗಳದ್ದು. ಆದರೆ ಸಿನಿಮಾವನ್ನು ಎಲ್ಲರೂ ನೋಡಬಹುದು’ ಎಂದರು ವಿಜಯ್.

ಚಿತ್ರ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !